ಹಿಂದುಗಳ ಜನಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ: ಯುವತಿಯ ಸ್ವವಿವಾಹ ಯೋಜನೆ ಕುರಿತು ಬಿಜೆಪಿ ನಾಯಕಿಯ ಕಿಡಿ

Update: 2022-06-04 13:05 GMT
 ಬಿಜೆಪಿ ನಾಯಕಿ ಸುನೀತಾ ಶುಕ್ಲಾ (Photo: Twitter/@ANI)

ಅಹ್ಮದಾಬಾದ್: ಜೂನ್ 11ರಂದು ತಾನು ಸ್ವಯಂ ವಿವಾಹವಾಗುವುದಾಗಿ ಹೇಳಿ ಗುಜರಾತ್‍ನ ವಡೋದರಾದ 24 ವರ್ಷದ ಕ್ಷಮಾ ಬಿಂದು ದೇಶಾದ್ಯಂತ  ಸಂಚಲನ ಸೃಷಿಸಿರುವ ನಡುವೆಯೇ ಆಕೆಯ ನಗರದ ಮಾಜಿ ಉಪ ಮೇಯರ್ ಆಗಿರುವ ಬಿಜೆಪಿ ನಾಯಕಿ ಸುನೀತಾ ಶುಕ್ಲಾ ಅವರು ಪ್ರತಿಕ್ರಿಯಿಸಿ ಇಂತಹ ವಿವಾಹಗಳು ಹಿಂದು ಧರ್ಮದ ವಿರುದ್ಧವಾಗಿದೆ ಹಾಗೂ ಹಿಂದುಗಳ ಜನಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಎಂದಿದ್ದಾರೆ ಎಂದು hindustantimes.com ವರದಿ ಮಾಡಿದೆ.

"ತನ್ನ ಸ್ವಯಂವಿವಾಹಕ್ಕೆ ಆಕೆ ಆಯ್ದುಕೊಂಡ ಸ್ಥಳದ ಬಗ್ಗೆಯೂ ನನಗೆ ವಿರೋಧವಿದೆ. ಆಕೆಗೆ ಯಾವುದೇ ದೇವಸ್ಥಾನದಲ್ಲಿ ವಿವಾಹವಾಗಲು ಅನುಮತಿ ನೀಡುವುದಿಲ್ಲ.'' ಎಂದು ಸುನೀತಾ ಹೇಳಿದ್ದಾರೆ.

ಇನ್ನೂ ಪ್ರತಿಕ್ರಿಯಿಸಿದ ಅವರು ``ಏನಾದರೂ ಧರ್ಮದ ವಿರುದ್ಧ ನಡೆದರೆ ಆಗ ಯಾವ ಕಾನೂನು ಕೂಡ ಉಳಿಯುವುದಿಲ್ಲ,'' ಎಂದಿದ್ದಾರೆ.

ಕ್ಷಮಾ ಬಿಂದು ಅವರ ಸ್ವವಿವಾಹ ಯೋಜನೆ ಕುರಿತಂತೆ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕೂಡ ಟೀಕಿಸಿದ್ದರು. ಈಗಾಗಲೇ ಕ್ಷಮಾ ತಿಳಿಸಿದಂತೆ ಆಕೆ ವಡೋದರಾದ ಹರಿಹರೇಶ್ವರ ದೇವಸ್ಥಾನದಲ್ಲಿ ಜೂನ್ 11ರಂದು ವಿವಾಹವಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News