"ಅವರಿಗೆ ಕನಸುಗಳನ್ನು ಬಿತ್ತಲಾಯಿತು, ಆದರೆ...": ಕಾಶ್ಮೀರಿ ಪಂಡಿತರ ಬಗ್ಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ

Update: 2022-06-05 08:23 GMT
Photo:PTI

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರವು ಕಾಶ್ಮೀರಿ ಪಂಡಿತರ ಹಿಂದೆ ದೃಢವಾಗಿ ನಿಂತಿದೆ ಹಾಗೂ  ಅವರಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಭರವಸೆ ನೀಡಿದ್ದಾರೆ.

"ಕಳೆದ ಕೆಲವು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ  ಹಿಂದೂಗಳನ್ನು  ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿವೆ. ಒಂದು ತಿಂಗಳೊಳಗೆ ಒಂಬತ್ತು ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ. ನೂರಾರು ಕಾಶ್ಮೀರಿ ಪಂಡಿತರು ಹೆದರಿ ಓಡಿಹೋಗಲು ಆರಂಭಿಸಿದ್ದಾರೆ. ಇಡೀ ದೇಶವೇ ಆಕ್ರೋಶಗೊಂಡಿದೆ" ಎಂದು ಠಾಕ್ರೆ ಹೇಳಿದ್ದಾರೆ.

ಕಣಿವೆಯಲ್ಲಿನ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಯಿಂದ  ಅಕ್ಷರಶಃ ಪರಾರಿಯಾಗಿದ್ದಾರೆ. ಅವರಿಗೆ ಮನೆಗೆ ಹಿಂದಿರುಗುವ ಕನಸುಗಳನ್ನು ಬಿತ್ತಲಾಯಿತು. ಆದರೆ ಅವರು ಮನೆಗೆ ಹಿಂದಿರುಗಿದ ನಂತರ ಪಂಡಿತರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಈ ಭಯಾನಕ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂಖ್ಯೆಯ ಪಂಡಿತರು ಪಲಾಯನ ಮಾಡಲು ಆರಂಭಿಸಿದರು. ಇದು ಆಘಾತಕಾರಿ ಹಾಗೂ  ಗೊಂದಲದ ಘಟನೆಯಾಗಿದೆ" ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News