ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲಾಗುತ್ತಿಲ್ಲ, ಕೊಳಕು ರಾಜಕೀಯ ಮಾಡಲು ಮಾತ್ರ ತಿಳಿದಿದೆ: ಕೇಜ್ರಿವಾಲ್

Update: 2022-06-05 13:55 GMT

ಹೊಸದಿಲ್ಲಿ,ಜೂ.5: ಯೋಜಿತ ಹತ್ಯೆಗಳಿಂದಾಗಿ ಕಾಶ್ಮೀರಿ ಪಂಡಿತರನ್ನು ಕಣಿವೆಯನ್ನು ತೊರೆಯುವಂತೆ ಬಲವಂತಗೊಳಿಸಲಾಗುತ್ತಿದೆ ಎಂದು ರವಿವಾರ ಇಲ್ಲಿ ಹೇಳಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ದಾಳಿಗಳನ್ನು ನಿಲ್ಲಿಸಲು ಕ್ರಿಯಾ ಯೋಜನೆಯೊಂದನ್ನು ಘೋಷಿಸುವಂತೆ ಕೇಂದ್ರವನ್ನು ಆಗ್ರಹಿಸಿದರು.

‌ಕಾಶ್ಮೀರದಲ್ಲಿ ಹತ್ಯೆಗಳನ್ನು ವಿರೋಧಿಸಿ ಇಲ್ಲಿಯ ಜಂತರ್ಮಂತರ್ನಲ್ಲಿ ಆಪ್‌ನ ‘ಜನ ಆಕ್ರೋಶ ರ್ಯಾಲಿ’ಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,1990ರ ದಶಕದಲ್ಲಿ ಅನುಭವಿಸಿದ್ದರ ಪುನರಾವರ್ತನೆಯನ್ನು ಕಾಶ್ಮೀರಿ ಪಂಡಿತರು ಎದುರಿಸುತ್ತಿದ್ದಾರೆ ಎಂದರು. ಕಾಶ್ಮೀರವನ್ನು ನಿಭಾಯಿಸುವುದು ಬಿಜೆಪಿಗೆ ಸಾಧ್ಯವಿಲ್ಲ. ಅವರಿಗೆ ಕೊಳಕು ರಾಜಕೀಯ ನಡೆಸುವುದು ಮಾತ್ರ ಗೊತ್ತು. ಕಾಶ್ಮೀರ ವಿಷಯದಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ ಎಂದ ಕೇಜ್ರಿವಾಲ್,ಬಿಜೆಪಿ ಸರಕಾರವು ಹತ್ಯೆಗಳನ್ನು ಪ್ರತಿಭಟಿಸಲೂ ಕಾಶ್ಮೀರಿ ಪಂಡಿತರಿಗೆ ಅವಕಾಶ ನೀಡುತ್ತಿಲ್ಲ. ಅವರನ್ನು ದಿಗ್ಬಂಧನದಲ್ಲಿ ಇರಿಸಲಾಗುತ್ತಿದೆ,ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾಶ್ಮೀರದಲ್ಲಿ ವಾಸವಾಗಿರುವ ಜನರಿಗೆ ಭದ್ರತೆಯನ್ನು ಒದಗಿಸುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲಗೊಂಡಿದೆ. 1990ರ ದಶಕದಲ್ಲಿಯೂ ಇದೇ ರೀತಿ ನಡೆದಿತ್ತು ಎಂದು ಹೇಳಿದರು.
 
ಪಾಕಿಸ್ತಾನದ ವಿರುದ್ಧವೂ ದಾಳಿ ನಡೆಸಿದ ಕೇಜ್ರಿವಾಲ್,ಅದು ಕಾಶ್ಮೀರದಲ್ಲಿಯ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ. ಇಂತಹ ಚಿಲ್ಲರೆ ಕುತಂತ್ರಗಳನ್ನು ಅದು ನಿಲ್ಲಿಸಬೇಕು. ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿಯೇ ಇರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News