2022ರಲ್ಲಿ 9,000 ರೈಲುಗಳ ಸಂಚಾರ ರದ್ದು: ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದ ರೈಲ್ವೇ
Update: 2022-06-05 22:44 IST
ಹೊಸದಿಲ್ಲಿ, ಜೂ. 5: ಈ ವರ್ಷ ರೈಲ್ವೇ 9,000 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಈ ಪೈಕಿ ಕಲ್ಲಿದ್ದಲು ಸಾಗಾಟದ ಕಾರಣಕ್ಕೆ ಕಳೆದ 3 ತಿಂಗಳಲ್ಲಿ 1,900ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚಂದ್ರಶೇಖರ್ ಗೌರ್ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಸಲ್ಲಿಸಿದ ಪ್ರಶ್ನೆಗೆ ರೈಲ್ವೆ ಈ ಪ್ರತಿಕ್ರಿಯೆ ನೀಡಿದೆ.
6,995 ರೈಲುಗಳ ಸಂಚಾರವನ್ನು ನಿರ್ವಹಣಾ ಕಾರ್ಯ ಅಥವಾ ನಿರ್ಮಾಣ ಉದ್ದೇಶದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದರಲ್ಲಿ 1934ಕ್ಕೂ ಅಧಿಕ ರೈಲುಗಳ ಸಂಚಾರವನ್ನು ಕಲ್ಲಿದ್ದಲು ಸಾಗಾಟದ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಮೇ ವರೆಗೆ ರದ್ದುಗೊಳಿಸಲಾಗಿದೆ ಎಂದಿದೆ. ವಿದ್ಯುತ್‌ನ ತೀವ್ರ ಕೊರತೆಯ ಕಾರಣದಿಂದ ಪ್ರಯಾಣಿಕರ ರೈಲುಗಳ ಸಂಚಾರದ ಬದಲು ಕಲ್ಲಿದ್ದಲು ಸಾಗಾಟದ ರೈಲಿಗೆ ಆದ್ಯತೆ ನೀಡಲಾಗಿತ್ತು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.