×
Ad

ಗೋವಾ ಬೀಚ್‍ನಲ್ಲಿ ಬ್ರಿಟಿಷ್ ಮಹಿಳೆಯ ಅತ್ಯಾಚಾರ: ಓರ್ವ ಸೆರೆ

Update: 2022-06-07 08:07 IST

ಪಣಜಿ: ಉತ್ತರ ಗೋವಾದ ಪ್ರಸಿದ್ಧ ಅರಂಬೋಲ್ ಬೀಚ್ ಬಳಿಕ ಸ್ವೀಟ್ ಲೇಕ್‍ನಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಗೋವಾ ಪೊಲೀಸರು 32 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಜೋಯೆಲ್ ವಿನ್ಸೆಂಟ್ ಡಿಸೋಜಾ ಎಂಬ ಅರೋಪಿ ಜೂನ್ 2ರಂದು ಬ್ರಿಟಿಷ್ ಮಹಿಳೆ ಬೀಚ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆಪಾದಿಸಲಾಗಿದೆ.

ಪತಿಯ ಜತೆ ಗೋವಾಗೆ ಪ್ರವಾಸ ಬಂದಿದ್ದ ಸಂತ್ರಸ್ತೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News