×
Ad

ಸಿಧು ಮೂಸೆವಾಲಾ ಅವರ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

Update: 2022-06-07 13:11 IST
Phoro: twitter.com/INCIndia

ಮಾನ್ಸಾ, (ಪಂಜಾಬ್): ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕುಟುಂಬವನ್ನು ಮಂಗಳವಾರ  ಭೇಟಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು  ಗಾಯಕನ ಹತ್ಯೆಗೆ ಸಂತಾಪ ಸೂಚಿಸಿದರು.

ಇಂದು ಬೆಳಗ್ಗೆ ಚಂಡಿಗಢ ವಿಮಾನ ನಿಲ್ದಾಣ ತಲುಪಿದ ರಾಹುಲ್ ಗಾಂಧಿ ನೇರವಾಗಿ ಗಾಯಕನ ಹುಟ್ಟೂರು ಮೂಸಾಗೆ ತೆರಳಿದರು.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ  ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾಜ್ವಾ, ಮಾಜಿ ಉಪಮುಖ್ಯಮಂತ್ರಿ ಓ.ಪಿ. ಸೋನಿ ಹಾಗೂ  ಪಕ್ಷದ ಇತರ ನಾಯಕರು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆಗಿದ್ದರು.

ರಾಹುಲ್ ಗಾಂಧಿ ಭೇಟಿಯ ಹಿನ್ನೆಲೆಯಲ್ಲಿ  ಮೂಸವಾಲಾ ಕುಟುಂಬದವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಮೇ 29 ರಂದು ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸವಾಲಾ ಅವರನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News