×
Ad

ಸ್ಕೂಟರ್ ಕಳವು

Update: 2022-06-07 21:51 IST

ಮಂಗಳೂರು : ನಗರದ ಪಂಪ್‌ವೆಲ್‌ನ ಕಟ್ಟಡವೊಂದರ ಬಳಿ ನಿಲ್ಲಿಸಿದ್ದ ಮರೋಳಿಯ ಜಾಯ್ಸನ್ ಗೋವಿಯಸ್ ಎಂಬವರ ಸ್ಕೂಟರ್ ಕಳವಾದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಯ್ಸನ್ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಅಂಗಡಿ ಹೊಂದಿದ್ದು ಅವರ ಅಣ್ಣನ ಸ್ಕೂಟರ್‌ನ್ನು ಬಳಸುತ್ತಿದ್ದರು. ಮೇ 31ರಂದು ರಾತ್ರಿ 8ಕ್ಕೆ ಅಂಗಡಿ ಬಳಿ ಸ್ಕೂಟರ್ ಪಾರ್ಕ್ ಮಾಡಿದ್ದರು. ರಾತ್ರಿ 11ಕ್ಕೆ ಮನೆಗೆ ಹೋಗಲೆಂದು ಸ್ಕೂಟರ್‌ಗೆ ಕೀ ಹಾಕಿ ವಾಪಸ್ ಅಂಗಡಿ ಬಳಿಗೆ ಬಂದು ಅಂಗಡಿಯನ್ನು ಮುಚ್ಚಿ ಸ್ಕೂಟರ್ ಬಳಿಗೆ ತೆರಳಿದಾಗ ಸ್ಕೂಟರ್‌ನಲ್ಲಿ ಕೀ ಕಾಣಿಸುತ್ತಿರಲಿಲ್ಲ. ಹುಡುಕಾಡಿದರೂ ಕೀ ಸೀಗದೇ ಇದ್ದಾಗ ಸ್ಕೂಟರ್‌ನ್ನು ಪಂಪ್‌ವೆಲ್‌ನ ಬಿಲ್ಡಿಂಗ್‌ವೊಂದರ ಬಳಿ ರಾತ್ರಿ ೧೧:೩೦ಕ್ಕೆ ಪಾರ್ಕ್ ಮಾಡಿ ಕಾರಿನಲ್ಲಿ ಮನೆಗೆ ಹೋಗಿದ್ದರು.

ಮರುದಿನ ಬೆಳಗ್ಗೆ ೮ಕ್ಕೆ ಸ್ಕೂಟರ್ ಪಾರ್ಕ್ ಮಾಡಿದ ಸ್ಥಳದಲ್ಲಿ ನೋಡಿದಾಗ ಸ್ಕೂಟರ್ ಕಳ್ಳತನವಾಗಿತ್ತು. ಈ ಸ್ಕೂಟರ್‌ನ ಮೌಲ್ಯ 35,000 ರೂ. ಎಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News