ಕಲ್ಮಾಡಿ : ಮನೆಗೆ ಆಕಸ್ಮಿಕವಾಗಿ ಬೆಂಕಿ; ಅಪಾರ ನಷ್ಟ
Update: 2022-06-08 23:41 IST
ಮಲ್ಪೆ: ಸಮೀಪ ಮನೆಯೊಂದರ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಇಂದು ರಾತ್ರಿ ಕಲ್ಮಾಡಿಯಲ್ಲಿ ನಡೆದಿದೆ.
ಕಲ್ಮಾಡಿಯ ನಿವಾಸಿ ವಿಠ್ಠಲ್ ಕೋಟ್ಯಾನ್ ಎಂಬವರ ಮನೆಯ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆವರಿಸಿತ್ತು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಕಲ್ಮಾಡಿಯ ಸ್ಥಳೀಯರು ಕೂಡ ಬೆಂಕಿ ನಂದಿಸಲು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.