ಮುಂಬೈನಲ್ಲಿ ವಸತಿ ಕಟ್ಟಡ ಕುಸಿತ, ಓರ್ವ ಬಲಿ, 16 ಮಂದಿಗೆ ಗಾಯ

Update: 2022-06-09 05:10 GMT

ಮುಂಬೈ: ಮುಂಬೈನ ಬಾಂದ್ರಾ ಪಶ್ಚಿಮದ ಶಾಸ್ತ್ರಿ ನಗರದಲ್ಲಿ ಬುಧವಾರ ರಾತ್ರಿ ಜಿ+2 ಕಟ್ಟಡ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ)  ತಿಳಿಸಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

"ಶಾಸ್ತ್ರಿ ನಗರದಲ್ಲಿನ ಜಿ+2 ಮನೆ ಕುಸಿತದಲ್ಲಿ ದುರದೃಷ್ಟವಶಾತ್ ಒಬ್ಬರು ಸಾವನ್ನಪ್ಪಿದ್ದಾರೆ . 16 ಜನರನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ  ದಾಖಲಿಸಲಾಗಿದೆ. ಇತರ ಗಾಯಗೊಂಡವರ ವರದಿಗಳಿಗಾಗಿ ಕಾಯಲಾಗುತ್ತಿದೆ.  ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ " ಎಂದು ಬಿಎಂಸಿ ಟ್ವೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News