ಶೈಕ್ಷಣಿಕ ಸಂಸ್ಥೆಯ ಜಾಹಿರಾತಿನಲ್ಲಿ ತಪ್ಪು ಮಾಹಿತಿ: ನಟ ಅಲ್ಲು ಅರ್ಜುನ್‌ ವಿರುದ್ಧ ದೂರು

Update: 2022-06-11 16:52 GMT
ಅಲ್ಲು ಅರ್ಜುನ್‌ (File Photo: PTI)

ಹೈದರಾಬಾದ್: ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಗೆ ಜಾಹಿರಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಎದುರಾಗಿದೆ. ಶಿಕ್ಷಣ ಸಂಸ್ಥೆಯೊಂದ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವುದು ಟೀಕೆಗೆ ಒಳಗಾಗಿದ್ದಾರೆ. ಅಲ್ಲು ಅರ್ಜುನ್ ಅವರ ಮುಖವನ್ನು ಬಳಸಿದ ಸಂಸ್ಥೆಯ ವಿಶೇಷ ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೋತಾ ಉಪೇಂದ್ರ ರೆಡ್ಡಿ ಹೇಳಿದ್ದಾರೆ. ಇಂತಹ ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಜಾಹೀರಾತಿನಲ್ಲಿ  ನಕಲಿ ಮಾಹಿತಿ ನೀಡಿದ್ದಕ್ಕಾಗಿ ಅಲ್ಲು ಅರ್ಜುನ್ ವಿರುದ್ಧ ಉಪೇಂದ್ರ ರೆಡ್ಡಿ ಅಂಬರ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಜನರನ್ನು ವಂಚಿಸಿದ ಅಲ್ಲು ಅರ್ಜುನ್ ಮತ್ತು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಪೇಂದ್ರ ರೆಡ್ಡಿ ಒತ್ತಾಯಿಸಿದ್ದಾರೆ. 

ಜಾಹೀರಾತಿಗಾಗಿ ಅಲ್ಲು ಅರ್ಜುನ್ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಝೊಮ್ಯಾಟೋ ಫುಡ್ ಡೆಲಿವರಿ ಆಪ್ ಅನ್ನು ಜಾಹಿರಾತಿನಲ್ಲಿ ದಕ್ಷಿಣ ಭಾರತೀಯ ಸಿನೆಮಾಗಳನ್ನು ನಿಂದಿಸಲಾಗಿದೆ ಎಂದು ಅಲ್ಲು ಅರ್ಜುನ್‌ ಟೀಕೆಗೊಳಗಾಗಿದ್ದರು. ಅಷ್ಟೇ ಅಲ್ಲದೆ, ಸರ್ಕಾರಿ ಸಾರಿಗೆ ಸೇವೆಯನ್ನು ಕಡೆಗಣಿಸಿ ಬೈಕ್ ಟ್ಯಾಕ್ಸಿ ಆ್ಯಪ್ ಪ್ರಚಾರ ಮಾಡಿದ ಪ್ರಕರಣದಲ್ಲೂ ಅಲ್ಲು ಅರ್ಜುನ್‌ ಗೆ ಎಚ್ಚರಿಕೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News