×
Ad

ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ: ಉತ್ತರ ಪ್ರದೇಶ ಪೊಲೀಸರಿಂದ 304 ಮಂದಿಯ ಬಂಧನ

Update: 2022-06-12 23:25 IST

ಲಕ್ನೋ, ಜೂ. 12: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿಯ ಇಬ್ಬರು ನಾಯಕರು ನೀಡಿದ ಅವಮಾನಕಾರಿ ಹೇಳಿಕೆ ವಿರುದ್ಧ ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 8 ಜಿಲ್ಲೆಗಳಿಂದ 304 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ದಿಲ್ಲಿ, ಉತ್ತರಪ್ರದೇಶ, ಜಾರ್ಖಂಡ್, ಕರ್ನಾಟಕ, ಪಶ್ಚಿಮಬಂಗಾಳ, ಹೈದರಾಬಾದ್ ಹಾಗೂ ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿತ್ತು.
ಉತ್ತರಪ್ರದೇಶದಲ್ಲಿ ಸಹಾರನಪುರ, ಮೊರದಾಬಾದ್, ಪ್ರಯಾಗ್‌ರಾಜ್ ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಶುಕ್ರವಾರ ಪ್ರಾರ್ಥನೆಯ ಬಳಿಕ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದ್ದರು ಹಾಗೂ ಪ್ರಯಾಗ್ ರಾಜ್‌ನ ಅಟಲಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದ್ದರು. ಸಹಾರನಪುರದಲ್ಲಿ ಪ್ರತಿಭಟನಕಾರರು ಶರ್ಮಾ ಅವರಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News