×
Ad

ವೈದ್ಯರ ದೂರಿನ ನಂತರ ಪತಂಜಲಿಯ ಕೆಲ ಆಯುರ್ವೇದ ಉತ್ಪನ್ನಗಳ ಜಾಹೀರಾತು ಪ್ರಕಟಣೆ ಸ್ಥಗಿತ

Update: 2022-06-13 16:30 IST

ತಿರುವನಂತಪುರಂ: ಸಕ್ಕರೆ ಕಾಯಿಲೆ, ಹೃದಯ ಮತ್ತು ಲಿವರ್ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಂಡು ಪತಂಜಲಿ ಆರ್ಯುವೇದ ಸಂಸ್ಥೆಯ ಕೆಲ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸಿದ ಪತಂಜಲಿಗೆ ಸಂಯೋಜಿತವಾಗಿರುವ ಕೊಝಿಕ್ಕೋಡ್ ದಿವ್ಯಾ ಫಾರ್ಮಸಿಯ ವಿರುದ್ಧ ವೈದ್ಯರೊಬ್ಬರು ದೂರು ನೀಡಿದ ನಂತರ  ತನ್ನ ಕೆಲ ಆರ್ಯುವೇದ ಉತ್ಪನ್ನಗಳ ಜಾಹೀರಾತುಗಳನ್ನು ವಾಪಸ್ ಪಡೆದಿರುವುದಾಗಿ ಫಾರ್ಮಸಿ ಹೇಳಿದೆ ಎಂದು thenewsminute.com ವರದಿ ಮಾಡಿದೆ.

ಕಣ್ಣೂರು ಮೂಲದ ನೇತ್ರ ವೈದ್ಯರಾದ ಡಾ. ಕೆ ವಿ ಬಾಬು ಎಂಬವರು ಪತಂಜಲಿ ಆರ್ಯುವೇದ ಪ್ರಕಟಿಸಿದ್ದ ಮೂರು ಜಾಹೀರಾತುಗಳ ವಿರುದ್ಧ ದೂರು ದಾಖಲಿಸಿದ್ದರು. ನಂತರ ತಮ್ಮ ದೂರಿಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಯಲು ಅವರು ಮಾರ್ಚ್ 1ರಂದು ಆರ್‍ಟಿಐ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಎಪ್ರಿಲ್ 19ರಂದು ಅವರು ಉತ್ತರ ಪಡೆದಿದ್ದು ಜಾಹೀರಾತುಗಳನ್ನು ತೆಗೆದು ಹಾಕಲು ಆಯುಷ್ ಸಚಿವಾಲಯ ಸೂಚಿಸಿದೆ ಎಂದು ಅದರಲ್ಲಿ ತಿಳಿಸಲಾಗಿತ್ತು.

"ಕೆಲವೊಂದು ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಿಕೊಂಡು ಔಷಧಿಗಳ ಜಾಹೀರಾತು ಪ್ರಕಟಿಸುವ ಹಾಗಿಲ್ಲ. ಈ ಜಾಹೀರಾತುಗಳು ಫೆಬ್ರವರಿ 1ರಂದು ಪ್ರಕಟಗೊಂಡಿದವು. ಫೆಬ್ರವರಿ 24ರಂದು ಭಾರತದ ಡ್ರಗ್ಸ್ ನಿಯಂತ್ರಕ ವಿ ಜಿ ಸೊಮಾನಿ ಅವರಿಗೆ ದೂರು ನೀಡಿ ಒಂದು ಔಷಧವು ಸೇವನೆಯ ಒಂದು ವಾರದಲ್ಲಿಯೇ ಕೊಲೆಸ್ಟರಾಲ್ ಮಟ್ಟವನ್ನು ಇಳಿಸಿ ಹೃದಯದ ಸಮಸ್ಯೆ  ಮತ್ತು ರಕ್ತದೊಡತ್ತಡ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಹೇಳಿತ್ತು ಎಂದು ದೂರಿದ್ದರು. ಈ ದೂರನ್ನು ನಂತರ ಆಯುಷ್ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು.

ಈ ಜಾಹೀರಾತುಗಳು ಆಕ್ಷೇಪಾರ್ಹ ಮತ್ತು ತಪ್ಪುದಾರಿಗೆಳೆಯುವಂತಹದ್ದು ಎಂದು ಸಚಿವಾಲಯ ಕಂಡುಕೊಂಡು ಅವುಗಳ ಪ್ರಕಟಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸೂಚಿಸಿತ್ತು. ಅಂತೆಯೇ  ದಿವ್ಯ ಯೋಗ ಮಂದಿರ್ ಟ್ರಸ್ಟ್ ಭಾಗವಾಗಿರುವ ದಿವ್ಯಾ ಫಾರ್ಮಸಿ ಈ ಜಾಹೀರಾತನ್ನು ತೆಗೆದು ಹಾಕಿರುವುದಾಗಿ ಉತ್ತರಾಖಾಂಡ ಆಯುರ್ವೇದಿಕ್ ಮತ್ತು ಯುನಾನಿ ಸೇವೆಗಳ ಪರವಾನಗಿ ಅಧಿಕಾರಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News