ವೀಸಾ ಇಲ್ಲದೆ ಭಾರತಕ್ಕೆ ನುಸುಳಿದ ಇಬ್ಬರು ಚೀನಾ ಪ್ರಜೆಗಳ ಬಂಧನ

Update: 2022-06-13 17:12 GMT
Photo: PTI

ಸೀತಾಮರ್ಹಿ (ಬಿಹಾರ್), ಜೂ. 13: ವೀಸಾ ಇಲ್ಲದೆ ಭಾರತಕ್ಕೆ ನುಸುಳಿದ ಹಾಗೂ ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ಸುಮಾರು ಹದಿನೈದು ದಿನಗಳ ಕಾಲ ತಂಗಿದ ಇಬ್ಬರು ಚೀನಾ ಪ್ರಜೆಗಳು ನೇಪಾಳದ ಗಡಿ ದಾಟಲು ಯತ್ನಿಸಿದ ಸಂದರ್ಭ ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಶಸಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಸಿಬ್ಬಂದಿ ಚೀನಾ ಪ್ರಜೆಗಳಾದ ಲು ಲಾಂಗ್ (28) ಹಾಗೂ ಯುವಾನ್ ಹೈಲಾಂಗ್ (34)ರನ್ನು ರವಿವಾರ ಬಂಧಿಸಿದ್ದಾರೆ ಎಂದು ಸೀತಾಮರ್ಹಿಯ ಪೊಲೀಸ್ ಅಧೀಕ್ಷಕ ಹರ್ಕಿಶೋರ್ ರಾಯ್ ಅವರು ತಿಳಿಸಿದ್ದಾರೆ.

ಅವರಲ್ಲಿ ಯಾವುದೇ ವೀಸಾ ಇಲ್ಲದೇ ಇದ್ದರೂ ಚೀನಾದ ಪಾಸ್‌ಪೋರ್ಟ್ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಅವರು ಟ್ಯಾಕ್ಸಿ ಇಳಿದು ಭಾರತ-ನೇಪಾಳ ಗಡಿಯನ್ನು ನಡೆದುಕೊಂಡು ದಾಟಲು ಯತ್ನಿಸಿದಾಗ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಅವರು, ತಾವು ನೇಪಾಳದಿಂದ ಲಿಫ್ಟ್ ಕೇಳಿ ಭಾರತ ಪ್ರವೇಶಿಸಿದೆವು. ಅಲ್ಲಿಂದ ನೋಯ್ಡಕ್ಕೆ ತೆರಳಿದೆವು. ಅಲ್ಲಿ ಪರಿಚಯಸ್ಥರ ಮನೆಯಲ್ಲಿ ತಂಗಿದೆವು ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News