ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹೇಳಿಕೆ ಪೋಸ್ಟ್: ಸಹಾರನಪುರದಿಂದ 18 ಮಂದಿಯ ಬಂಧನ

Update: 2022-06-13 19:55 GMT

ಮೀರತ್: ಕಳೆದ ಒಂದು ವಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹೇಳಿಕೆ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿ ಸಹಾರನಪುರದಿಂದ 12 ಮಂದಿ ಹಿಂದೂಗಳು ಹಾಗೂ 6 ಮುಸ್ಲಿಮರು ಸೇರಿದಂತೆ 18 ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಸೋಮವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹೇಳಿಕೆ ಕುರಿತಂತೆ ಹಲವು ಪ್ರಕರಣಗಳು ದಾಖಲಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.

‘‘ದ್ವೇಷದ ಹೇಳಿಕೆಯನ್ನು ಪೋಸ್ಟ್ ಮಾಡುವ ಮೂಲಕ ವಾತಾವರಣವನ್ನು ಹದಗೆಡಿಸುವ ಜನರನ್ನು ಗುರುತಿಸಲು ನಮ್ಮ ತಜ್ಞರು ಸಾಮಾಜಿಕ ಮಾಧ್ಯಮದ ಮೇಲೆ ನಿಗಾ ಇರಿಸಿದ್ದಾರೆ. ನಮ್ಮ ತಂಡ ಕೆಲವು ದ್ವೇಷದ ಹೇಳಿಕೆಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಹೇಳಿಕೆ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು’’ ಎಂದು ಅವರು ಹೇಳಿದ್ದಾರೆ. ಯಾವುದೇ ಧರ್ಮ ಹಾಗೂ ಸಮುದಾಯದ ವಿರುದ್ಧ ದ್ವೇಷದ ಹೇಳಿಕೆ ನೀಡುವುದರಲ್ಲಿ ತೊಡಗಿದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News