ವೈಯಕ್ತಿಕ ಜವಾಬ್ದಾರಿಯಾಗಿಸಿ ಮರಗಳ ರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯ: ಎಸಿ ರಾಜು
ಬ್ರಹ್ಮಾವರ : ಪ್ರತಿಯೊಂದು ಗಿಡ ಮರದ ರಕ್ಷಣೆಯನ್ನು ವೈಯಕ್ತಿಕ ಜವಾಬ್ದಾರಿಯಾಗಿಸಿ ಆದ್ಯತೆ ನೀಡು ವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ. ತಿಳಿಸಿದ್ದಾರೆ.
ಕಾಡೂರು ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರವಿವಾರ ಆಯೋಜಿ ಸಲಾದ ಹಸಿರು ನನ್ನೂರು- ನಡೂರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಾಡೂರು ಗ್ರಾಪಂ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ. ಮಾತನಾಡಿ, ನಾವು ನೆಟ್ಟು ಬೆಳೆಸುವ ಒಂದು ಗಿಡವೂ ನಾಶವಾಗದಂತೆ ಸುರಕ್ಷಿತವಾಗಿ ಬೆಳೆಸುವ ನಿಟ್ಟಿನಲ್ಲಿ ಸ್ಥಳೀಯ ಸಂಘಟನೆಗಳ ನೆರವು ಪಡೆದು ವೈಯಕ್ತಿಕ ನೆಲೆಯಲ್ಲಿ ಗಿಡಗಳನ್ನು ಬೆಳೆಸುವ ಹಾಗೂ ರಕ್ಷಿಸುವ ಕಾರ್ಯಕ್ರಮ ರೂಪಿಸಿದ್ದು, ಪ್ರತೀ ಹಂತವನ್ನು ವ್ಯಾಟ್ಸಪ್ ಮೂಲಕ ತಿಳಿಸುವಂತೆ ಯೋಜನೆ ರೂಪಿಸಲಾಗಿದೆ. ಉತ್ತಮವಾಗಿ ನಿರ್ವಹಿಸಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕಾಡೂರು ಗ್ರಾಪಂ ಅದ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ವ್ಯಾಪ್ತಿಯ ೧೨ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ನಾಗರಿಕರಿಗೆ ಗಿಡಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಸಂಯೋಜಕ ಸತೀಶ್ ಕುಲಾಲ್ ನಡೂರು, ಪಂಚಾಯತ್ ಸದಸ್ಯರಾದ ಜಲಂಧರ್, ಗಿರಿಜಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಶಿಕ್ಷಕ ಭಾಸ್ಕರ ಪೂಜಾರಿ, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿ ಗಳು ಉಪಸ್ಥಿತರಿದ್ದರು.