×
Ad

ಅಮೆರಿಕ ಫೆಡರಲ್ ರಿಸರ್ವ್‍ನಿಂದ ಮೂರು ದಶಕಗಳಲ್ಲೇ ಗರಿಷ್ಠ ಬಡ್ಡಿದರ ಏರಿಕೆ

Update: 2022-06-16 07:37 IST
Photo: Twitter/@federalreserve

ವಾಷಿಂಗ್ಟನ್: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕಳೆದ ಮೂರು ದಶಕಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರವನ್ನು ಏರಿಕೆ ಮಾಡಿದೆ. ಏರುತ್ತಿರುವ ಹಣದುಬ್ಬರ ವಿರುದ್ಧ ಸೆಣಸಾಡುತ್ತಿರುವ ಫೆಡರಲ್ ರಿಸರ್ವ್, ಬುಧವಾರ 0.75 ಪರ್ಸೆಂಟೇಜ್ ಪಾಯಿಂಟ್‍ನಷ್ಟು ಬಡ್ಡಿದರವನ್ನು ಏರಿಕೆ ಮಾಡಿದೆ.

ದೇಶದಲ್ಲಿ ಹಣದುಬ್ಬರವನ್ನು ಶೇಕಡ 2ರ ಮಟ್ಟಕ್ಕೆ ಇಳಿಸಲು ಬ್ಯಾಂಕ್ ಬದ್ಧವಾಗಿದೆ ಎಂದು ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಹೇಳಿಕೆ ನೀಡಿದೆ. ಹೀಗೆ ಬಡ್ಡಿದರವನ್ನು ಮತ್ತಷ್ಟು ಏರಿಸುವ ಎಲ್ಲ ಸಾಧ್ಯತೆಗಳಿವೆ.

ದೇಶದ ಕೇಂದ್ರೀಯ ಬ್ಯಾಂಕ್ 0.5 ಪರ್ಸೆಂಟೇಜ್ ಪಾಯಿಂಟ್ ಏರಿಕೆಗೆ ಅನುಮೋದನೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಣದುಬ್ಬರ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್, ಹಣದುಬ್ಬರ ವಿರುದ್ಧದ ಹೋರಾಟದ ಕ್ರಮವಾಗಿ ಈ ಹೆಜ್ಜೆ ಇಟ್ಟಿದೆ. ಇದಕ್ಕೂ ಮುನ್ನ 1994ರ ನವೆಂಬರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 75 ಮೂಲ ಅಂಶಗಳಷ್ಟು ಬಡ್ಡಿದರ ಏರಿಕೆ ಮಾಡಲಾಗಿತ್ತು.

ಕೇಂದ್ರ ಬ್ಯಾಂಕಿನ ಯೋಜನೆಗಳನ್ನು ವಿವರಿಸುವ ಸಲುವಾಗಿ ಫೆಡ್ ಚಏರ್ ಜೆರೋಮ್ ಪೊವೆಲ್ ಆ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. 
ಕಳೆದ ಮಾರ್ಚ್‍ನಲ್ಲಿ ಅಂದಾಜಿಸಿದ 1.9 ಪ್ರತಿಶತಕ್ಕೆ ಬದಲಾಗಿ ವರ್ಷಾಂತ್ಯದ ವೇಳೆಗೆ ಫೆಡರಲ್ ಫಂಡ್ ದರ 3.4 ಶೇಕಡ ಆಗುವ ಸಾಧ್ಯತೆ ಇದೆ ಎಂದು ಸಮಿತಿ ಸದಸ್ಯರು ಅಭಿಅಪ್ರಾಯಪಟ್ಟಿದ್ದಾರೆ. ವರ್ಷಾಂತ್ಯದ ವೇಳೆಗೆ ಹಣದುಬ್ಬರ ಶೇಕಡ 5.2ಕ್ಕೆ ಏರುವ ನಿರೀಕ್ಷೆಯಿದ್ದು, ಜಿಡಿಪಿ ಪ್ರಗತಿ ಈ ಹಿಂದೆ ಅಂದಾಜಿಸಿದ್ದ 2.8 ಶೇಕಡ ಬದಲಾಗಿ 1.7ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News