ಲಂಡನ್: ಟಿಂಡರ್ ಆ್ಯಪ್‍ನಲ್ಲಿ ಪರಿಚಯವಾದ ಮಹಿಳೆಯ ಅತ್ಯಾಚಾರ; ಭಾರತ ಮೂಲದ ವೈದ್ಯನಿಗೆ ನಾಲ್ಕು ವರ್ಷ ಜೈಲು

Update: 2022-06-16 03:48 GMT
ಮಹೇಶ್ ಗಿಲ್ (Photo: Twitter/@ForthValPolice)

ಲಂಡನ್: ಮೂರು ವರ್ಷದ ಹಿಂದೆ ಟಿಂಡರ್ ಆ್ಯಪ್ ಮೂಲಕ ಪರಿಚಯವಾಗಿದ್ದ ಮಹಿಳೆಯ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಭಾರತದ ಮೂಲದ ವೈದ್ಯನಿಗೆ ಸ್ಕಾಟ್ಲೆಂಡ್ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಹೇಶ್ ಗಿಲ್ (39) ಎಂಬ ಆರೋಪಿಯನ್ನು ಎಡಿನ್‍ಬರ್ಗ್ ಹೈಕೋರ್ಟ್ ಕಳೆದ ತಿಂಗಳು ತಪ್ಪಿತಸ್ಥ ಎಂದು ನಿರ್ಣಯಿಸಿತ್ತು ಹಾಗೂ ಸ್ಕಾಟ್ಲೆಂಡ್ ಪೊಲೀಸರು ವಿವರಿಸಿದಂತೆ "ಈ ಭಯಾನಕ ವರ್ತನೆ"ಗಾಗಿ ಈ ವಾರ ಶಿಕ್ಷೆ ಪ್ರಕಟಿಸಿದೆ. ವಿವಾಹಿತ ವೈದ್ಯ ಆನ್‍ಲೈನ್ ಡೇಟಿಂಗ್ ಆ್ಯಪ್ ಟಿಂಡರ್‍ನಲ್ಲಿ ಮೈಕ್ ಎಂದು ಪರಿಚಯಿಸಿಕೊಂಡು, 2018ರ ಡಿಸೆಂಬರ್‍ನಲ್ಲಿ ಸ್ಟಲಿರ್ಂಗ್‍ನ ಹೋಟೆಲ್‍ನಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಿ ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿತ್ತು.

"ಗಿಲ್‍ಗೆ ನೀಡಲಾದ ಶಿಕ್ಷೆ, ನಿಮ್ಮನ್ನು ನ್ಯಾಯದ ಕಟಕಟೆಗೆ ತರಲಾಗುತ್ತದೆ ಎನ್ನುವುದನ್ನು ಎಲ್ಲ ಲೈಂಗಿಕ ಅಪರಾಧಗಳ ತಪ್ಪಿತಸ್ಥರಿಗೆ ಸ್ಪಷ್ಟವಾಗಿ ಸಾರುವ ಸಂದೇಶ ಎಂದು ಸ್ಕಾಟ್ಲೆಂಡ್ ಪೊಲೀಸ್ ಪಡೆಯ ಸಾರ್ವಜನಿಕ ಸುರಕ್ಷಾ ಘಟಕದ ಡಿಟೆಕ್ಟಿವ್ ಇನ್‍ಸ್ಪೆಕ್ಟರ್ ಫೋಬ್ರ್ಸ್ ವಿಲ್ಸನ್ ಹೇಳಿದ್ದಾರೆ.

"ತಮ್ಮ ಭಯಾನಕ ವರ್ತನೆಗೆ ಗಿಲ್ ಪರಿಣಾಮ ಎದುರಿಸಬೇಕು. ಸಂತ್ರಸ್ತೆ ಮುಂದೆ ಬಂದು ತನ್ನ ಕಥೆಯನ್ನು ಹೇಳುವ ಮೂಲಕ ಅದ್ಭುತ ಸಾಹಸ ಪ್ರದರ್ಶಿಸಿದ್ದಾರೆ. ಅವರು ತನಿಖೆ ವೇಳೆ ನೀಡಿದ ಸಹಕಾರಕ್ಕೆ ಧನ್ಯವಾದ ಹೇಳುತ್ತಿದ್ದೇನೆ. ಇಂದಿನ ಫಲಿತಾಂಶ ಆಕೆಗೆ ಸಮಾಧಾನ ತರಬಹುದು" ಎಂದು ವಿಲ್ಸನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News