ಪ್ರಧಾನಿ ಅವರನ್ನು ಭೇಟಿಯಾದ ಆಸಿಯಾನ್ ವಿದೇಶಾಂಗ ಸಚಿವರು

Update: 2022-06-17 09:39 GMT

ಹೊಸದಿಲ್ಲಿ, ಜೂ. 16: ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾದರು. ಅಲ್ಲದೆ, ಆಸಿಯಾನ್ ಮತ್ತು ಭಾರತದ ನಡುವಿನ ಸಹಕಾರದ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. 

ನಾವು 30 ವರ್ಷಗಳ ಭಾರತ ಆಸಿಯಾನ್‌ನ ನಿಕಟ ಸಹಕಾರವನ್ನು ಆಚರಿಸುತ್ತಿರುವಾಗ ಆಸಿಯಾನ್‌ನ ವಿದೇಶಾಂಗ ಸಚಿವರು ಹಾಗೂ ಪ್ರತಿನಿಧಿಗಳೊಂದಿಗೆ ಉತ್ತಮ ಸಂವಹನ ನಡೆಸಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. 
ನಾವು ಭಾರತ-ಆಸಿಯಾನ್‌ನ ನಿಕಟ ಸಹಕಾರದ 30ನೇ ವರ್ಷವನ್ನು ಆಚರಿಸುತ್ತಿರುವುದರಿಂದ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರು ಹಾಗೂ ಪ್ರತಿನಿಧಿಗಳೊಂದಿಗೆ ಉತ್ತಮ ಸಂವಹನ ಹೊಂದಿದ್ದೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 

ಆಸಿಯಾನ್ ಈ ವಲಯದ ಅತಿ ಹೆಚ್ಚು ಪ್ರಭಾವಶಾಲಿ ಗುಂಪುಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಅಮೆರಿಕ, ಚೀನಾ, ಜಪಾನ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಇದರ ಮಾತುಕತೆಯ ಪಾಲುದಾರರಾಗಿದ್ದಾರೆ. 

‘‘ಭಾರತ-ಆಸಿಯಾನ್ ಸ್ನೇಹದಲ್ಲಿ ಒಂದು ಮೈಲುಗಲ್ಲು ! ನಮ್ಮ ಮಾತುಕತೆ ಸಂಬಂಧಗಳು ಹಾಗೂ 10 ವರ್ಷಗಳ ವ್ಯೆಹಾತ್ಮಕ ಪಾಲುದಾರಿಕೆಯ ಹಿನ್ನೆಲೆಯಲ್ಲಿ ವಿಶೇಷ ಆಸಿಯಾನ್-ಭಾರತ ವಿದೇಶಾಂಗ ಸಚಿವರ ಸಭೆ (ಎಸ್‌ಎಐಎಫ್‌ಎಂಎಂ)ಯನ್ನು ಭಾರತ ಆಯೋಜಿಸಿದೆ. ಎಸ್‌ಎಐಎಫ್‌ಎಂಎಂ ಭಾಗೀದಾರರು ಪ್ರಧಾನಿ ಮೋದಿ ಅವರನ್ನ ಇಂದು ಬೆಳಗ್ಗೆ ಭೇಟಿಯಾದರು’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಟ್ವೀಟ್ ಮಾಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸಿಯಾನ್ ವಿದೇಶಾಂಗ ವ್ಯವಹಾರಗಳ ಸಚಿವರ ನಡುವಿನ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News