ಬ್ರಿಟನ್: 500ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ವರದಿ

Update: 2022-06-16 18:39 GMT
PHOTO:AP

ಲಂಡನ್, ಜೂ.16: ಬ್ರಿಟನ್ ನಲ್ಲಿ ದೃಢಪಟ್ಟಿರುವ ಮಂಕಿಪಾಕ್ಸ್ ಪ್ರಕರಣ ಬುಧವಾರ 500ರ ಗಡಿಯನ್ನು ದಾಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 ಮಂಗಳವಾರ ಇಂಗ್ಲೆಂಡಿನಲ್ಲಿ 52 ಪ್ರಕರಣ, ಸ್ಕಾಟ್ ಲ್ಯಾಂಡ್ ಮತ್ತು ವೇಲ್ಸ್ ನಲ್ಲಿ ತಲಾ 1 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು ಇದರೊಂದಿಗೆ ಬ್ರಿಟನ್ ನಲ್ಲಿ ಪತ್ತೆಯಾದ ಪ್ರಕರಣ 542ಕ್ಕೇರಿದೆ. ಇಂಗ್ಲೆಂಡಿನಲ್ಲಿ 504 ದೃಢೀಕೃತ ಪ್ರಕರಣ, ಸ್ಕಾಟ್ ಲ್ಯಾಂಡ್ ನಲ್ಲಿ 13, ಉತ್ತರ ಐರ್ಲ್ಯಾಂಡ್ ನಲ್ಲಿ 2 ಮತ್ತು ವೇಲ್ಸ್ ನಲ್ಲಿ 5 ದೃಢೀಕೃತ ಪ್ರಕರಣಗಳಿವೆ ಎಂದು ಬ್ರಿಟನ್‌ನ ಆರೋಗ್ಯ ಸುರಕ್ಷಾ ಏಜೆನ್ಸಿ (ಯುಕೆಎಚ್ಎಸ್ಎ) ಹೇಳಿದೆ.

ಯಾರು ಕೂಡಾ ಮಂಕಿಪಾಕ್ಸ್ ಸೋಂಕಿಗೆ ಒಳಗಾಗಬಹುದು. ರೋಗಲಕ್ಷಣ ಇರುವವರ ಜತೆ ನಿಕಟ ಸಂಪರ್ಕ ಇದ್ದರೆ ಸೋಂಕು ತಕ್ಷಣ ಹರಡುತ್ತದೆ ಎಂದು ಬ್ರಿಟನ್ ನ ಆರೋಗ್ಯ ಇಲಾಖೆ ಎಚ್ಚರಿಸಿದೆ. ಈಗಿನ ಸಂದರ್ಭದಲ್ಲಿ ಹೇಳುವುದಾದರೆ ಅಪಾಯದ ಸಾಧ್ಯತೆ ಕಡಿಮೆ. ಆದರೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ. ಮಂಕಿಪಾಕ್ಸ್ ಸಾಂಕ್ರಾಮಿಕ ಅತೀ ಶೀಘ್ರ ಹರಡುವ ಸಾಮರ್ಥ್ಯ ಹೊಂದಿದೆ ಎಂದು ‘ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರೋಪಿಕಲ್ ಮೆಡಿಸಿನ್’ನ ಪ್ರೊಫೆಸರ್ ಡೇವಿಡ್ ಹೆಯ್ಮೋನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News