ಮುಂಗಾರು ಪ್ರಗತಿ ಕುಂಠಿತ; ಶೇಕಡ 25ರಷ್ಟು ಮಳೆ ಅಭಾವ: ಹವಾಮಾನ ತಜ್ಞರು

Update: 2022-06-17 02:23 GMT

ಪುಣೆ: ಜೂನ್ ಅರ್ಧಭಾಗ ಕಳೆದರೂ ದೇಶದ ಹಲವೆಡೆಗಳಲ್ಲಿ ಇನ್ನೂ ಮುಂಗಾರು ಪ್ರಗತಿ ನಿರಾಶಾದಾಯಕ ವಾಗಿದೆ. ಇದರ ಪರಿಣಾಮ ಇಡೀ ದೇಶದಲ್ಲಿ ಶೇಕಡ 25ರಷ್ಟು ಮಳೆ ಅಭಾವ ಕಂಡುಬಂದಿದ್ದು, ಆತಂಕಕ್ಕೆ ಕಾಣವಾಗಿದೆ. ದಕ್ಷಿಣ ಪರ್ಯಾಯದ್ವೀಪ ಪ್ರದೇಶದಲ್ಲಿ ಮಳೆ ಅಭಾವದ ಪ್ರಮಾಣ ಶೇಕಡ 31ರಷ್ಟಿದ್ದರೆ, ಕೇಂದ್ರ ಭಾರತದಲ್ಲಿ ಮಳೆ ಅಭಾವ ಪ್ರಮಾಣ ಶೇಕಡ 60ರಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇಂದ್ರ ಭಾರತದ ಹಲವು ಕಡೆಗಳಿಗೆ ಮುಂಗಾರು ಇನ್ನೂ ಕಾಲಿಟ್ಟಿಲ್ಲ. ವಾಡಿಕೆಯಂತೆ ಜೂನ್ 15ರ ಒಳಗಾಗಿ ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಹಲವು ಪ್ರದೇಶಗಳಲ್ಲಿ ಮುಂಗಾರು ಆರಂಭವಾಗಿರುತ್ತದೆ.

ಹವಾಮಾನ ತಜ್ಞರೊಬ್ಬರ ಪ್ರಕಾರ ಸಕ್ರಿಯ ಮೀ ಯು (ಚೀನಾದ ಪ್ಲಮ್ ರೈನ್ಸ್) ಮಾರುತ ಭಾರತ ಪ್ರದೇಶದ ದೊಡ್ಡ ಪ್ರಮಾಣದ ತೇವಾಂಶವನ್ನು ಎಳೆದುಕೊಂಡಿರುವುದರಿಂದ ಚೀನಾದ ಬಹುತೇಕ ಪ್ರದೇಶಗಳಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಮಾರುತ ದುರ್ಬಲವಾದ ತಕ್ಷಣ ಅಂದರೆ ಮುಂದಿನ ವಾರದ ವೇಳೆಗೆ ನೈರುತ್ಯ ಮುಂಗಾರು ಬಲಗೊಳ್ಳಲಿದೆ.

ಕೇರಳ ಸರ್ಕಾರದ ಹವಾಮಾನ ಬದಲಾವಣೆ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಿ.ಎಸ್.ಪೈ ಅವರ ಪ್ರಕಾರ, ಅನಾನುಕೂಲಕರ ಮಡ್ಡೆನ್-ಜ್ಯೂಲಿಯನ್ ಹೊಯ್ದಾಟ (ಎಂಜೆಓ) ಹಂತ ಕೂಡಾ ದೇಶದಲ್ಲಿ ಮಳೆ ಕಡಿಮೆಯಾಗಲು ಕಾರಣ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News