ದಕ್ಷಿಣ ಆಫ್ರಿಕಾ-ಭಾರತ ತಂಡಗಳ ನಡುವಿನ ಫೈನಲ್‌ ಟಿ-20 ಪಂದ್ಯ ರದ್ದು: ಸರಣಿ ಸಮಬಲ

Update: 2022-06-19 17:19 GMT

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5ನೇ ಟಿ-ಟ್ವೆಂಟಿ ಪಂದ್ಯಾಟ ಮಳೆಯ ಕಾರಣದಿಂದ ರದ್ದುಗೊಂಡಿದೆ. ಸರಣಿ 2-2 ಅಂತರದಲ್ಲಿ ಸಮಬಲಗೊಂಡಿದ್ದು, ಇತ್ತಂಡಗಳನ್ನೂ ವಿಜಯಿಯೆಂದು ಘೋಷಿಸಲಾಗಿದೆ. ತೀವ್ರ ಪೈಪೋಟಿಯುತ ಪಂದ್ಯವನ್ನು ವೀಕ್ಷಿಸಲೆಂದು ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಪಂದ್ಯ ರದ್ದುಗೊಂಡಿರುವುದು ನಿರಾಶೆ ಮೂಡಿಸಿದೆ. 

ಪಂದ್ಯಾಟವು ಸಂಜೆ ಏಳು ಗಂಟೆಗೆ ಪ್ರಾರಂಭವಾಗಬೇಕಿತ್ತು. ಮಳೆಯ ಕಾರಣದಿಂದಾಗಿ ಪಂದ್ಯವು ವಿಳಂಬವಾಗಿ ಪ್ರಾರಂಭಗೊಂಡಿತ್ತು. ಟಾಸ್‌ ಸೋತ ಭಾರತ ತಂಡವು ಬ್ಯಾಟಿಂಗ್‌ ಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದು, ಇಶನ್‌ ಕಿಶನ್‌ ಹಾಗೂ ರಿತುರಾಜ್‌ ಗಾಯಕ್ವಾಡ್‌ ಬ್ಯಾಟಿಂಗ್‌ ಗೆ ಇಳಿದಿದ್ದರು. 3.3 ಓವರ್‌ ಗಳ ವೇಳೆ ಭಾರತ ತಂಡವು 28 ರನ್‌ ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಮಳೆಯಿಂದಾಗಿ  5 ಓವರ್‌ ಗಳ ಆಟದ ಸಾಧ್ಯತೆಯ ಕುರಿತು ಆಲೋಚಿಸಲಾಗಿತ್ತು. ಆದರೆ ಮಳೆ ನಿಲ್ಲುವ ಸೂಚನೆಗಳು ಕಾಣದಿದ್ದಾಗ ಪಂದ್ಯಾಟವನ್ನು ರದ್ದುಪಡಿಸಲಾಯಿತು.

ಸರಣಿ ಶ್ರೇಷ್ಠರಾಗಿ ಭಾರತೀಯ ವೇಗಿ ಭುವನೇಶ್ವರ್‌ ಕುಮಾರ್‌ ಮೂಡಿ ಬಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News