ಕಾರ್ಕಳ : ತೋಡಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

Update: 2022-06-22 15:25 GMT
ಸಾಂದರ್ಭಿಕ ಚಿತ್ರ

ಕಾರ್ಕಳ : ಪೆರ್ವಾಜೆ ಪತ್ತೊಂಜಿಕಟ್ಟೆ ಎಂಬಲ್ಲಿ ಜೂ.21ರಂದು ಸಂಜೆ ವೇಳೆ ತೋಡಿನ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರು ಮನೆಯಿಂದ ಕಾರ್ಕಳದ ಪೇಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ತೋಡಿನ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿರುವುದು ಕಂಡು ಬಂತು ಎಂದು ತಿಳಿಸಿದ್ದಾರೆ.

ಮಗು ಹುಟ್ಟಿದ ಬಳಿಕ ಸಾಯುವ ಉದ್ದೇಶದಿಂದಲೋ ಅಥವಾ ಹುಟ್ಟಿದ ಮಗುವಿನ ಜನನದ ರಹಸ್ಯವನ್ನು ಬಚ್ಚಿಡುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿ ಬಳಿಕ ಸಾಕ್ಷ್ಯಾ ಧಾರವನ್ನು ನಾಶ ಮಾಡುವ ಉದ್ದೇಶದಿಂದ ನವಜಾತಶಿಶುವಿನ ಮೃತದೇಹವನ್ನು  ತೋಡಿಗೆ  ಎಸೆದಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News