ಮಣಿಪಾಲ; ಗಾಂಧಿ ಸೆಂಟರ್‌ನ ಹಳೆ ವಿದ್ಯಾರ್ಥಿನಿಗೆ ಅಮೆರಿಕದ ಗಾಂಧಿ-ಕಿಂಗ್ ಫೆಲೋಶಿಪ್

Update: 2022-06-22 16:09 GMT
ಲಾವಣ್ಯ ಎನ್.ಕೆ.
 

ಮಣಿಪಾಲ : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಹಳೆ ವಿದ್ಯಾರ್ಥಿನಿ ಲಾವಣ್ಯ ಎನ್.ಕೆ. ಇವರನ್ನು ಅಮೆರಿಕದ ಬ್ಯೂರೋ ಆಫ್ ಎಜ್ಯುಕೇಷನ್ ಆ್ಯಂಡ್ ಕಲ್ಚರಲ್ ಅಫೇರ್ಸ್‌ನ ಪ್ರತಿಷ್ಠಿತ ಗಾಂಧಿ-ಕಿಂಗ್ ಫೆಲೋಶಿಪ್‌ಗೆ ಆಯ್ಕೆ ಮಾಡಲಾಗಿದೆ.

ಈ ಫೆಲೋಶಿಪ್‌ಗೆ ಆಯ್ಕೆಯಾದ ಹತ್ತು ಮಂದಿ ಭಾರತೀಯ ವಿದ್ಯಾರ್ಥಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಲಾವಣ್ಯ. ಇವರು ಶೀಘ್ರವೇ ಅಮೆರಿಕದ ಅಲಬಾಮಾ ವಿವಿಗೆ ಪ್ರಯಾಣ ಬೆಳೆಸಲಿದ್ದಾರೆ.

ಲಾವಣ್ಯ ಎನ್.ಕೆ. ಜಿಸಿಪಿಎಎಸ್‌ನ ೨೦೧೯-೨೦೨೧ನೇ ಸಾಲಿನ ‘ಇಕೋಸಾಫಿಕಲ್‌ ಎಸ್ಥೆಟಿಕ್ಸ್’ ಎ.ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಚೆನ್ನೈನ ನಲಂದಾವೇ ಫೌಂಡೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಾಂಧಿ-ಕಿಂಗ್ ಫೆಲೋಶಿಪ್‌ನ ಗುರಿ ಮಹಾತ್ಮಾ ಗಾಂಧಿ ಮತ್ತು ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಇವರ ಆಶಯದಂತೆ  ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಕುರಿತಂತೆ ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಅಮೆರಿಕಯ ಯುವನಾಯಕರನ್ನು ಪ್ರೇರೇಪಿಸುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News