ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ

Update: 2022-06-22 16:39 GMT

ಮಂಗಳೂರು : ಕೇಂದ್ರ ಸರಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಯೋಜನೆ ಅಭಿಯಾನದಲ್ಲಿ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ (ದನ, ಎಮ್ಮೆ, ಕೋಳಿ, ಕುರಿ, ಮೇಕೆ ಮತ್ತು ಹಂದಿ ಸಾಕಾಣಿಕೆ) ಜಾನುವಾರು ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ, ಸಹಕಾರ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.

ಮಿಶ್ರತಳಿ ೨ ದನಗಳಿಗೆ ೩೬,೦೦೦ ರೂ.ಗಳು, ಮೇಕೆ (೧೦+೧) ಘಟಕಕ್ಕೆ ೨೯,೯೫೦ ರೂ.ಗಳು, ಮೇಕೆ (೨೦+೧) ಘಟಕಕ್ಕೆ ೫೭,೨೦೦ ರೂ.ಗಳು, ಹಂದಿ ಘಟಕ (೧೦) ೬೦,೦೦೦ ರೂ.ಗಳು ಮತ್ತು ಮಾಂಸದ ಕೋಳಿ ಸಾಕಾಣಿಕೆಗೆ ಪ್ರತಿ ಕೋಳಿಗೆ ೮೦ ರೂ.ಗಳಂತೆ ಗರಿಷ್ಟ ೧,೬೦,೦೦೦ ರೂ.ಬ್ಯಾಂಕ್ ಸಾಲ ಒದಗಿಸಲಾಗುವುದು.ಈ ಸೌಲಭ್ಯವು ೨೦೨೨ರ ಜುಲೈ ೩೧ರವರೆಗೆ ಜಾರಿಯಲ್ಲಿರುತ್ತದೆ.

ಅರ್ಹ ರೈತರು ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಯಿಂದ ಅರ್ಜಿ ಪಡೆದುಕೊಳ್ಳಬಹುದು. ಮಾಹಿತಿಗೆ ಮೊ.ಸಂ: ೯೭೪೨೩೧೫೮೫೭ ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News