ಈಡಿ ಒತ್ತಡದಲ್ಲಿ ಪಕ್ಷ ತೊರೆಯುವವರು ಬಾಳಾ ಠಾಕ್ರೆ ಅವರ ನಿಜವಾದ ಭಕ್ತರಲ್ಲ: ಸಂಜಯ್ ರಾವತ್

Update: 2022-06-23 08:02 GMT

ಮುಂಬೈ: “ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಸರಕಾರವು ಅಲುಗಾಡುತ್ತಿರುವಂತೆ  ಕಂಡುಬಂದರೂ, ಪಕ್ಷವು ಇನ್ನೂ ಪ್ರಬಲವಾಗಿದೆ ಹಾಗೂ  ಬಂಡಾಯ ಎದ್ದಿರುವವರು ಬಾಳಾ ಠಾಕ್ರೆ ಅವರ ನಿಜವಾದ ಭಕ್ತರಲ್ಲ. ಸುಮಾರು 20 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಮುಂಬೈಗೆ ಬಂದಾಗ  ನಿಮಗೆ ತಿಳಿಯುತ್ತದೆ. ಯಾವ ಪರಿಸ್ಥಿತಿಯಲ್ಲಿ ಹಾಗೂ  ಒತ್ತಡದಲ್ಲಿ ಈ ಶಾಸಕರು ನಮ್ಮನ್ನು ತೊರೆದಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ" ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಗುರುವಾರ ಬೆಳಿಗ್ಗೆ ANI ಗೆ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಶಿವಸೇನೆ ಶಾಸಕರ ಮೇಲೆ ಒತ್ತಡ ಹೇರಲು ಕೇಂದ್ರ ಸರಕಾರದ ಅಡಿಯಲ್ಲಿರುವ ಜಾರಿ ನಿರ್ದೇಶನಾಲಯವನ್ನು(ಈಡಿ ) ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

 "ಈಡಿ ಒತ್ತಡದಲ್ಲಿ ಪಕ್ಷವನ್ನು ತೊರೆಯುವವರು  ಬಾಳಾಸಾಹೇಬ್ ರ ನಿಜವಾದ ಭಕ್ತರಲ್ಲ. ನಾವು ನಿಜವಾದ ಬಾಳಾಸಾಹೇಬ್ ಭಕ್ತರು" ಎಂದು ಅವರು ಹೇಳಿದರು.  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ತಂದೆಗೆ ನಿಷ್ಠೆಯಿಂದ ಇರುವುದಾಗಿ  ಪ್ರತಿಜ್ಞೆ ಮಾಡಿದರು.

"ನಮಗೆ ಈಡಿ ಒತ್ತಡವಿದೆ. ಆದರೆ ನಾವು ಉದ್ಧವ್ ಠಾಕ್ರೆ ಅವರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತೇವೆ. ಬಹುಮತದ ಪರೀಕ್ಷೆ ನಡೆದಾಗ  ಪ್ರತಿಯೊಬ್ಬರೂ ಯಾರು ಧನಾತ್ಮಕ ಮತ್ತು ಯಾರು ನಕಾರಾತ್ಮಕರು ಎಂದು ಎಲ್ಲರೂ ನೋಡುತ್ತಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News