60,000 ಕೋಟಿ ರೂ. ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ ಗೌತಮ್‌ ಅದಾನಿ

Update: 2022-06-23 18:31 GMT

ಹೊಸದಿಲ್ಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಅವರ 60 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ $ 7.7 ಬಿಲಿಯನ್ (ರೂ 60,000 ಕೋಟಿ) ಸಾಮಾಜಿಕ ಸೇವೆಗಳಿಗೆ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.

ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಅದಾನಿ ಫೌಂಡೇಶನ್ ಈ ದೇಣಿಗೆಯನ್ನು ನೀಡುತ್ತದೆ ಎಂದು ಅದಾನಿ ಗುರುವಾರ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಈ ಮೂರು ಕ್ಷೇತ್ರಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು, ಈ ಕ್ಷೇತ್ರದೊಳಗೆ ಹಣ ಹಂಚಿಕೆಯನ್ನು ನಿರ್ಧರಿಸಲು ನಾವು ಮುಂಬರುವ ತಿಂಗಳುಗಳಲ್ಲಿ ಮೂರು ತಜ್ಞರ ಸಮಿತಿಗಳನ್ನು ರಚಿಸುತ್ತೇವೆ" ಎಂದು ಅವರು ಹೇಳಿದ್ದಾರೆ. ಸಮಿತಿಗಳು ಅದಾನಿ ಕುಟುಂಬದ ಸದಸ್ಯರನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

"ಇದು ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿ ಫೌಂಡೇಶನ್ ಒಂದಕ್ಕೆ ಮಾಡಿರುವ ಅತಿದೊಡ್ಡ ವರ್ಗಾವಣೆಯಾಗಿದೆ" ಎಂದು ಹೇಳಿದ ಅವರು, ತಮ್ಮ ತಂದೆ ಶಾಂತಿಲಾಲ್ ಅದಾನಿಯವರ ಜನ್ಮ ಶತಮಾನೋತ್ಸವ ವರ್ಷವನ್ನು ಗೌರವಿಸುವ ಸಲುವಾಗಿಯೂ ಇದನ್ನು ಮಾಡಲಾಗಿದೆ ಎಂದು ಅವರು  ಹೇಳಿದ್ದಾರೆ.

ಶುಕ್ರವಾರ 60 ವರ್ಷಕ್ಕೆ ಕಾಲಿಟ್ಟಿರುವ ಅದಾನಿ ಅವರು ಸುಮಾರು $92 ಶತಕೋಟಿ ನಿವ್ವಳ ಮೌಲ್ಯದೊಂದಿಗೆ, ಈ ವರ್ಷ ತನ್ನ ಸಂಪತ್ತಿಗೆ $15 ಶತಕೋಟಿಯನ್ನು ಸೇರಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News