50 ಶಾಸಕರು ನನಗೆ ಬೆಂಬಲ ನೀಡುತ್ತಿದ್ದಾರೆ: ಏಕನಾಥ ಶಿಂಧೆ

Update: 2022-06-24 04:17 GMT
Photo:PTI

ಹೊಸದಿಲ್ಲಿ : ಪಕ್ಷದ ಮುಖ್ಯಸ್ಥ  ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯಕ್ಕೆ 50 ಕ್ಕೂ ಹೆಚ್ಚು ಶಾಸಕರು ಬೆಂಬಲ ನೀಡುತ್ತಿದ್ದಾರೆ. 50 ಶಾಸಕರಲ್ಲಿ  ಸುಮಾರು 40 ಮಂದಿ ಶಿವಸೇನೆ ಶಾಸಕರಾಗಿದ್ದಾರೆ  ಎಂದು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ನಮ್ಮ ಪಾತ್ರದಲ್ಲಿ ನಂಬಿಕೆ ಇರುವವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುಂದುವರಿಸಲು ಬಯಸುತ್ತೇವೆ, ಅದನ್ನು ಇಷ್ಟಪಡುವವರು ಬರುತ್ತಾರೆ.  ಬಂಡಾಯ ಶಾಸಕರು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ'' ಎಂದು ಶಿಂಧೆ ಹೇಳಿದರು.

ಬಂಡಾಯ ಶಾಸಕರ ವಿರುದ್ಧ ಅನರ್ಹತೆ ನೋಟಿಸ್‌ಗಳನ್ನು ನೀಡುವ ಶಿವಸೇನೆಯ ಕ್ರಮವು "ಕಾನೂನುಬಾಹಿರ" ಎಂದು 58 ವರ್ಷದ ಶಿಂಧೆ ಹೇಳಿದ್ದಾರೆ.

"ನಿನ್ನೆ ಅವರು ಮಾಡಿರುವುದು ಕಾನೂನುಬಾಹಿರ, ಅವರಿಗೆ ಆ  ಹಕ್ಕಿಲ್ಲ. ನಮಗೆ ಬಹುಮತವಿದೆ ಹಾಗೂ ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳು ಮುಖ್ಯ, ಅವರು  ಅಂತಹ ಅಮಾನತು ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಶಿಂಧೆ ಅವರು ಪಕ್ಷಾಂತರ ವಿರೋಧಿ ಕಾನೂನಿಗೆ ಒಳಪಡದೆ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಅಗತ್ಯವಾದ 37 ಎಂಎಲ್‌ಎಗಳ ನಿರ್ಣಾಯಕ ಸಂಖ್ಯೆಯನ್ನು ತಲುಪಿದ್ದಾರೆ. ನಿನ್ನೆಯವರೆಗೂ ಶಿವಸೇನೆಯ 37 ಶಾಸಕರು ಹಾಗೂ  9 ಪಕ್ಷೇತರರು ಅವರ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News