ಶರದ್ ಪವಾರ್‌ಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ: ಸಂಜಯ್ ರಾವತ್ ಆರೋಪ

Update: 2022-06-24 04:36 GMT
Photo:PTI

ಮುಂಬೈ: ಮಹಾರಾಷ್ಟ್ರ ಮೈತ್ರಿಕೂಟದ ನಾಯಕ ಶರದ್ ಪವಾರ್ ಅವರಿಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ  ಅಮಿತ್ ಶಾ ಅವರು ತಮ್ಮ ಸಚಿವರ ಇಂತಹ ಬೆದರಿಕೆಗಳನ್ನು ಕ್ಷಮಿಸುತ್ತಾರೆಯೇ ಎಂದು ರಾವತ್ ಪ್ರಶ್ನಿಸಿದ್ದಾರೆ.

"ಅವರು  ಮಹಾರಾಷ್ಟ್ರದ ಮಣ್ಣಿನ ಮಗ. ಕೇಂದ್ರ ಸಚಿವರೊಬ್ಬರು  ಪವಾರ್ ಗೆ ಬೆದರಿಕೆ ಹಾಕುತ್ತಿದ್ದಾರೆ. ಮೋದಿ ಜಿ, ಅಮಿತ್ ಶಾ, ನೀವು ಕೇಳಿದ್ದೀರಾ? ನಿಮ್ಮ ಸಚಿವರು ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ  ನೀವು ಅಂತಹ ಬೆದರಿಕೆಗಳನ್ನು ಬೆಂಬಲಿಸುತ್ತೀರಾ? ಎಂದು ಮಹಾರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತದೆ" ಎಂದು ರಾವತ್ ಹೇಳಿದರು.

ಶರದ್ ಪವಾರ್ ಅವರು ಮಹಾ ವಿಕಾಸ್ ಅಘಾಡಿ ಸರಕಾರವನ್ನು ಉಳಿಸಲು ಪ್ರಯತ್ನಿಸಿದರೆ ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ, ಅವರನ್ನು ರಸ್ತೆಯಲ್ಲೇ ನಿಲ್ಲಿಸಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ. ಸರಕಾರ ಉಳಿಯಲಿ ಅಥವಾ ಹೋಗಲಿ, ಶರದ್ ಪವಾರ್ ಅವರ ಕುರಿತು ಇಂತಹ ಮಾತು ಸ್ವೀಕಾರಾರ್ಹವಲ್ಲ”ಎಂದು ಶಿವಸೇನೆ ವಕ್ತಾರ ಹಾಗೂ  ಸಂಸದ ರಾವತ್  ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News