'ಅಗ್ನಿವೀರರು' ಪಿಂಚಣಿಗೆ ಅರ್ಹರಲ್ಲದಿದ್ದರೆ, ನನ್ನ ಪಿಂಚಣಿ ತ್ಯಜಿಸಲು ಸಿದ್ಧ: ವರುಣ್ ಗಾಂಧಿ

Update: 2022-06-24 07:44 GMT
Photo:PTI

ಹೊಸದಿಲ್ಲಿ: ಸಶಸ್ತ್ರ ರಕ್ಷಣಾ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಕೇಂದ್ರ ಸರಕಾರದ ಹೊಸ 'ಅಗ್ನಿಪಥ್' ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಶುಕ್ರವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅಗ್ನಿವೀರ’ರಿಗೆ ಪಿಂಚಣಿ ನೀಡದಿರುವ ಸರಕಾರದ ಯೋಜನೆಯನ್ನು ಗಾಂಧಿ ಪ್ರಶ್ನಿಸಿದರು.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿಈ ಕುರಿತು ಹಿಂದಿಯಲ್ಲಿ ಟ್ವೀಟಿಸಿರುವ ವರುಣ್ ಗಾಂಧಿ,  "ಅಲ್ಪಾವಧಿಗೆ ಸೇವೆ ಸಲ್ಲಿಸುವ ಅಗ್ನಿವೀರರಿಗೆ ಪಿಂಚಣಿ ಪಡೆಯುವ ಹಕ್ಕಿಲ್ಲವೆಂದಾದರೆ  ಜನ ಪ್ರತಿನಿಧಿಗಳಿಗೆ ಈ 'ಅನುಕೂಲತೆ' ಏಕೆ ನೀಡಲಾಗಿದೆ? ರಾಷ್ಟ್ರರಕ್ಷಕರಿಗೆ ಪಿಂಚಣಿ ಅಧಿಕಾರ ಇಲ್ಲವಾದರೆ ನಾನು ಪಿಂಚಣಿ ತ್ಯಜಿಸಲು ಸಿದ್ಧನಿದ್ದೇನೆ.  ಅಗ್ನಿವೀರರು  ಪಿಂಚಣಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಶಾಸಕರು ಹಾಗೂ  ಸಂಸದರು ನಮ್ಮ ಪಿಂಚಣಿಗಳನ್ನು ತ್ಯಜಿಸಬಹುದೇ?"ಎಂದು ಕೇಳಿದ್ದಾರೆ.

ಭಾರತೀಯ ಯುವಕರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಕೇಂದ್ರವು ಜೂನ್ 14 ರಂದು ಹೊಸ ಅಲ್ಪಾವಧಿಯ ನೇಮಕಾತಿ ನೀತಿಯನ್ನು ಅನಾವರಣಗೊಳಿಸಿತು. 'ಅಗ್ನಿಪಥ್' ಎಂದು ಕರೆಯಲ್ಪಡುವ ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಮೂರು ಸೇವೆಗಳಲ್ಲಿ ಯಾವುದಾದರೂ ಒಂದರಲ್ಲಿ  'ಅಗ್ನಿವೀರ್'ರಾಗಿ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News