ಸೂರತ್‌ನಲ್ಲಿ ತುಳು ಸಂಘಟನೆಗಳ ಪ್ರಮುಖರ ಸಭೆ

Update: 2022-06-24 17:03 GMT

ಮಂಗಳೂರು: ತುಳು ಭಾಷೆ ಹಾಗೂ ಅದರ ಸಂಸ್ಕೃತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸುತ್ತಾ ಪ್ರೋತ್ಸಾಹಿಸು ತ್ತಿರುವ ಹೊರ ರಾಜ್ಯದ ತುಳು ಸಂಘಟನೆಗೆ ವಿಶೇಷ ಆದ್ಯತೆ ನೀಡಬೇಕು ಎಂಬ ಬೇಡಿಕೆಯನ್ನು ಸರಕಾರದ ಗಮನಕ್ಕೆ ತಂದು ಆ ಸಂಘಟನೆಗಳಿಗೆ ವಿಶೇಷ ಅನುದಾನದೊಂದಿಗೆ ಸರಕಾರದ ಮಾನ್ಯತೆ ಸಿಗುವಂತಾಗಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ ಸಾರ್ ಹೇಳಿದರು.

ಗುಜರಾತ್‌ನ ಸೂರತ್‌ನಲ್ಲಿ ವಿವಿಧ ತುಳು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಬಿಟ್ಟು ಹೊರ ರಾಜ್ಯ ಮತ್ತು ಹೊರ ರಾಷ್ಟ್ರದಲ್ಲಿ ತುಳು ಭಾಷಾಭಿಮಾನವನ್ನು ಹೆಚ್ಚಿಸುವ ಸಂಘಟನಾ ತ್ಮಕ ಕೆಲಸವನ್ನು ಮಾಡುತ್ತಿರುವ ಸಂಘಟನೆಗಳಿಗೆ ಗೌರವ ಸಿಗಬೇಕು. ಗುಜರಾತ್‌ನ ಬರೋಡವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುವ ಶಶಿಧರ ಶೆಟ್ಟಿ ಅವರ ಶ್ರಮ ಹಾಗೂ ಸಂಘಟನಾತ್ಮಕ ನಾಯಕತ್ವದಿಂದ ಇಂದು ಸೂರತ್, ಬರೋಡಾ, ಅಂಕ್ಲೇಶ್ವರ, ವಾಫಿ, ಅಹಮ್ಮದಾಬಾದ್ ಪ್ರದೇಶಗಳಲ್ಲಿ ತುಳು ಸಂಘಟನೆಗಳು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭ ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ತುಳು ಅಕಾಡಮಿಯ ಸದಸ್ಯ ನಾಗೇಶ್ ಕುಲಾಲ್ ಕುಳಾಯಿ, ಬರೋಡ ತುಳು ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ, ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ವಾಸು ಪೂಜಾರಿ, ಕರ್ನಾಟಕ ಸಮಾಜ ಸೂರತ್‌ನ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ, ಅಧ್ಯಕ್ಷ ದಿನೇಶ್ ಬಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ನಿಕಟಪೂರ್ವ ಅಧ್ಯಕ್ಷ ಮನೋಜ್ ಪೂಜಾರಿ, ತುಳು ಸಂಘ ಅಂಕ್ಲೇಶ್ವರದ ರವಿನಾಥ್ ಶೆಟ್ಟಿ, ಶಂಕರ ಕೆ. ಶೆಟ್ಟಿ, ಅಶೋಕ್ ಶೆಟ್ಟಿ, ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ವಾಪಿಯ ಸದಾಶಿವ ಗುರುವಪ್ಪಪೂಜಾರಿ, ಬಾಲಕೃಷ್ಣ ಸದಾನಂದ ಶೆಟ್ಟಿ,  ಉದಯ ಭೋಜ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಗುಜರಾತ್‌ನ ಅಜಿತ್ ಎಸ್. ಶೆಟ್ಟಿ, ವಿಶಾಲ್ ಶಾಂತ, ತುಳು ಸಂಘ ಅಹ್ಮದಾಬಾದ್‌ನ ಮೋಹನ್ ಪೂಜಾರಿ, ಅಪ್ಪುಶೆಟ್ಟಿ, ಮಾಧವ ಶೆಟ್ಟಿ, ವಿಶಾಲ್ ಶೆಟ್ಟಿ, ಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ, ಸದಾಶಿವ ಪೂಜಾರಿ, ಪ್ರದೀಪ್ ಪೂಜಾರಿ, ಉದಯ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News