ದಿಢೀರ್ ಪರೀಕ್ಷೆ ಆಧರಿಸಿ ವಾಹನಗಳಿಗೆ ಸ್ಟಾರ್ ರೇಟಿಂಗ್: ಗಡ್ಕರಿ

Update: 2022-06-24 17:39 GMT

ಹೊಸದಿಲ್ಲಿ, ಜೂ. ೨೪:  ಭಾರತದಲ್ಲಿ ವಾಹನಗಳು ದಿಢೀರ್ ಪರೀಕ್ಷೆಯ ಕಾರ್ಯಕ್ಷಮತೆ ಆಧರಿಸಿ ಸ್ಟಾರ್ ರೇಟಿಂಗ್ ಪಡೆಯಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಶುಕ್ರವಾರ ಹೇಳಿದ್ದಾರೆ. 

ಭಾರತದಲ್ಲಿ ವಾಹನಗಳಿಗೆ ದಿಡೀರ್ ಪರೀಕ್ಷೆಗಳಲ್ಲಿನ ಕಾರ್ಯಕ್ಷಮತೆ  ಆಧರಿಸಿ ಸ್ಟಾರ್ ರೇಟಿಂಗ್ ನೀಡಲು ಭಾರತ್ ಎನ್‌ಸಿಎಪಿ (ನೂತನ ಕಾರು ಮೌಲ್ಯಮಾಪನ ಕಾರ್ಯಕ್ರಮ) ಪರಿಚಯಿಸಿದ ಕರಡು ಜಿಎಸ್‌ಆರ್ ಅಧಿಸೂಚನೆಗೆ ಅನುಮತಿ ನೀಡಿದ ಗಡ್ಕರಿ, ಭಾರತ್-ಎನ್‌ಸಿಎಪಿ ಕಾರುಗಳ ರೇಟಿಂಗ್ ಆಧರಿಸಿ ಸುರಕ್ಷಿತ ಕಾರನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ಮೂಲ ಉಪಕರಣಗಳ ಉತ್ಪಾದಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲಿದೆ ನೆರವಾಗಲಿದೆ ಎಂದು ಹೇಳಿದ್ದಾರೆ.  

ದಿಡೀರ್ ಪರೀಕ್ಷೆ ಆಧರಿಸಿ ಭಾರತೀಯ ವಾಹನಗಳಿಗೆ ಸ್ಟಾರ್ ರೇಟಿಂಗ್ ನೀಡುವುದು ವಾಹನಗಳಲ್ಲಿ ರಚನಾತ್ಮಕತೆಯನ್ನು, ಪ್ರಯಾಣಿಕರ ಸುರಕ್ಷೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ, ಭಾರತೀಯ ಅಟೋಮೊಬೈಲ್‌ನಲ್ಲಿ ರಫ್ತು ಅರ್ಹತೆಯನ್ನು ಹೆಚ್ಚಿಸಲಿವೆ ಎಂದು ಅವರು ತಿಳಿಸಿದ್ದಾರೆ. 

ಅಸ್ತಿತ್ವದಲ್ಲಿರುವ ಭಾರತೀಯ ನಿಯಮಗಳೊಂದಿಗೆ ಜಾಗತಿಕ ದಿಡೀರ್ ಪರೀಕ್ಷಾ ಶಿಷ್ಟಾಚಾರಗಳನ್ನು ಜೊತೆಗೂಡಿಸಿ ಭಾರತ್ ಎನ್‌ಸಿಎಪಿಯ  ಪರೀಕ್ಷಾ ಶಿಷ್ಟಾಚಾರವನ್ನು ರೂಪಿಸಲಾಗಿದೆ. ಇದು ಮೂಲ ಸಲಕರಣೆ ಉತ್ಪಾದಕರಿಗೆ ತಮ್ಮ ವಾಹನಗಳನ್ನು ಭಾರತದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News