ಅಮೆರಿಕ: ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ಪ್ರಯಾಣ ಸೌಲಭ್ಯದ ಕೊಡುಗೆ

Update: 2022-06-25 15:43 GMT

ನ್ಯೂಯಾರ್ಕ್, ಜೂ.25: ಅಮೆರಿಕದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳಲು ಸಾಂವಿಧಾನಿಕವಾಗಿ ಇದ್ದ ಸ್ವಾತಂತ್ರ್ಯದ ಆಯ್ಕೆಯನ್ನು ಅಲ್ಲಿನ ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದ ಬಳಿಕ, ದೇಶದಿಂದ ಹೊರಗೆ ಪ್ರಯಾಣಿಸಿ ಗರ್ಭಪಾತ ಮಾಡಿಸಿಕೊಳ್ಳಬಯಸುವ ಮಹಿಳಾ ಉದ್ಯೋಗಿಗಳಿಗೆ ಹಲವು ಸಂಸ್ಥೆಗಳು ಸೌಲಭ್ಯದ ಘೋಷಣೆ ಮಾಡಿವೆ. ಆಯ್ಕೆಯ ಗರ್ಭಪಾತ ಸಹಿತ ಜೀವಕ್ಕೆ ಬೆದರಿಕೆಯಿಲ್ಲದ ವೈದ್ಯಕೀಯ ಚಿಕಿತ್ಸೆಗೆ ಪ್ರಯಾಣ ವೆಚ್ಚವಾಗಿ ವಾರ್ಷಿಕ 4,000 ಡಾಲರ್ ಮೊತ್ತ ನೀಡುವುದಾಗಿ ಅಮಝಾನ್ ಸಂಸ್ಥೆ ಘೋಷಿಸಿದೆ.

 ಒಂದು ವೇಳೆ ವೈದ್ಯಕೀಯ ಸೇವೆ ಅವರ ಮಾತೃದೇಶದಲ್ಲಿ ಲಭ್ಯವಿಲ್ಲದಿದ್ದರೆ ವಿದೇಶಕ್ಕೆ ತೆರಳಿ ಗರ್ಭಪಾತ ಸಹಿತ ವೈದ್ಯಕೀಯ ಸೇವೆ ಪಡೆಯುವ ವೆಚ್ಚವನ್ನು ಉದ್ಯೋಗಿಗಳ ಆರೋಗ್ಯ ಸೇವೆ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ. ಅಮೆರಿಕದಲ್ಲಿನ ತನ್ನ ಉದ್ಯೋಗಿಗಳ ಪ್ರಯಾಣ ವೆಚ್ಚದ ವ್ಯಾಪ್ತಿಯಲ್ಲಿ ಗರ್ಭಪಾತ ಮತ್ತು ಲಿಂಗ-ದೃಢೀಕರಣ ಆರೈಕೆ ಸೇವೆಯನ್ನು ಸೇರಿಸುವುದಾಗಿ ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದೆ. ಕಾನೂನಿನ ಅಂಶಗಳಿಗೆ ಒಳಪಟ್ಟು ಗರ್ಭಪಾತ ಸೇರಿದಂತೆ ವೈದ್ಯಕೀಯ ಸೇವೆ ಪಡೆಯಲು ಉದ್ಯೋಗಿಗಳಿಗೆ ನೆರವಾಗುವುದಾಗಿ ಮೆಟಾ ಫ್ಲ್ಯಾಟ್ಫಾರ್ಮ್ ಹೇಳಿದೆ. ವಾಲ್ಟ್ಡಿಸ್ನಿ ಸಂಸ್ಥೆ, ನೆಟ್ಫ್ಲಿಕ್ಸ್, ಸಿಟಿ ಗ್ರೂಪ್, ಜೆಪಿ ಮೋರ್ಗನ್ ಚೇಸ್ ಆ್ಯಂಡ್ ಕಂಪೆನಿ, ಸ್ಟಾರ್ಬಕ್ಸ್ ಕಾರ್ಪ್, ಅಮೆರಿಕನ್ ಎಕ್ಸ್ಪ್ರೆಸ್, ಉಬೆರ್ ಟೆಕ್ನಾಲಜೀಸ್, ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಮುಂತಾದ ಸಂಸ್ಥೆಗಳು ಈ ಕೊಡುಗೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News