ಆಸ್ಪತ್ರೆಯ ಕಟ್ಟಡದ ಮೇಲಿನಿಂದ ಧುಮುಕಲು ಯತ್ನಿಸಿ, ಜಾರಿಬಿದ್ದು ರೋಗಿ ಸಾವು: ರಕ್ಷಣಾ ಕಾರ್ಯಾಚರಣೆ ವಿಫಲ

Update: 2022-06-25 16:13 GMT
Photo: ANI

ಕೋಲ್ಕತ್ತ: ವಾರ್ಡ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಸ್ಪತ್ರೆ ಕಟ್ಟಡದ ಎಂಟನೇ ಮಹಡಿಯಿಂದ ಧುಮುಕಲು ಯತ್ನಿಸಿ ಬಳಿಕ ಜಾರಿಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತದ ನ್ಯೂರೋಸಯನ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಹಲವು ಸಮಯಗಳಿಂದ ಕಟ್ಟಡದ ಅಂತಸ್ತುಗಳ ನಡುವೆ ಕುಳಿತಿದ್ದ ಆತನನ್ನು ರಕ್ಷಿಸಲು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡಗಳು ಆಗಮಿಸಿದರೂ ಆತನನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ. 

"ಆತ ಆ ಸ್ಥಳದಲ್ಲೇಕೆ ಕುಳಿತಿದ್ದಾನೆ ಎಂದು ಕೇಳಿದರೆ ಏನೂ ಹೇಳುತ್ತಿಲ್ಲ. ಸಮವಸ್ತ್ರದಲ್ಲಿರುವ ಜನರನ್ನು ಆತ ಹತ್ತಿರ ಹೋಗಲು ಬಿಡುತ್ತಿಲ್ಲ. ನಾವು ಕೆಳಗೆ ನೆಟ್‌ ಗಳನ್ನು ಅಳವಡಿಸಿದ್ದೇವೆ. ರಕ್ಷಣೆಗೆ ನಮ್ಮಿಂದಾಗುವ ಪ್ರಯತ್ನ ನಡೆಸುತ್ತೇವೆ" ಎಂದು ಅಗ್ನಿಶಾಮಕ ದಳದ ಅಧಿಕಾರಿ ಹೇಳಿದ್ದಾಗಿ ANI ವರದಿ ಮಾಡಿತ್ತು. ಬಳಿಕ ಆತನ ಆಸ್ಪತ್ರೆಯ ಎಂಟನೆ ಮಹಡಿಯಿಂದ ಕೆಳಗಿನ ಮಹಡಿಗೆ ಬರಲು ಪ್ರಯತ್ನಿಸುತ್ತಿದ್ದಾಗ ಕೈ ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಆದರೆ ಅಧಿಕಾರಿಗಳು ಆತನನ್ನು ರಕ್ಷಿಸುವಲ್ಲಿ ವಿಫಲವಾದ ಕುರಿತು ಸಾಮಾಜಿಕ ತಾಣದಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೃತ ವ್ಯಕ್ತಿಯನ್ನು ಸುಜಿತ್‌ ಅಧಿಕಾರಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News