ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿಗಳ ವಿರುದ್ಧ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಗುಜರಾತ್ ಪೊಲೀಸರು

Update: 2022-06-27 09:20 GMT
Photo:AFP

ಅಹಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದ ಮೇಲೆ ಮುಂಬೈ ಮೂಲದ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಹಾಗೂ  ಮಾಜಿ ಐಪಿಎಸ್  ಅಧಿಕಾರಿ ಸಂಜೀವ್ ಭಟ್ ಅವರನ್ನು ತನಿಖೆ ಮಾಡಲು ಗುಜರಾತ್ ಪೊಲೀಸರು ರವಿವಾರ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿದ್ದಾರೆ ಎಂದು The Hindu ವರದಿ ಮಾಡಿದೆ. .

ಅಹಮದಾಬಾದ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದರ್ಶನ್‌ ಸಿನ್ಹ್ ಬಿ ಬರಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ ಗುಜರಾತ್ ಪೊಲೀಸರು ರವಿವಾರ ಸೆಟಲ್ವಾಡ್ ಹಾಗೂ  ಶ್ರೀಕುಮಾರ್ ಅವರನ್ನು ಬಂಧಿಸಿದ್ದಾರೆ. ದೂರಿನಲ್ಲಿ, ಮಾಜಿ ಐಪಿಎಸ್ ಅಧಿಕಾರಿ ಭಟ್ ಹೆಸರು ಕೂಡ ಇದೆ.

ಅಹಮದಾಬಾದ್‌ನ ನ್ಯಾಯಾಲಯವು ರವಿವಾರ ಸೆಟಲ್ವಾಡ್  ಹಾಗೂ  ಶ್ರೀಕುಮಾರ್ ಅವರನ್ನು ಜುಲೈ 2 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News