ವರ್ಷಾಂತ್ಯದೊಳಗೆ ಯುದ್ಧ ಅಂತ್ಯವಾಗಲು ಪ್ರಯತ್ನಿಸಿ: ವಿಶ್ವ ಮುಖಂಡರಿಗೆ ಝೆಲೆಂಸ್ಕಿ ಆಗ್ರಹ

Update: 2022-06-27 15:55 GMT
PHOTO: Twitter/@ZelenskyyUa

ಬರ್ಲಿನ್, ಜೂ.27: ತನ್ನ ದೇಶದ ಮೇಲೆ ರಶ್ಯ ನಡೆಸಿರುವ ಆಕ್ರಮಣವನ್ನು ಈ ವರ್ಷಾಂತ್ಯದೊಳಗೆ ಅಂತ್ಯಗೊಳಿಸಲು ಗರಿಷ್ಟ ಪ್ರಯತ್ನ ನಡೆಸುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆಂಸ್ಕಿ ಜಿ7 ಶೃಂಗಸಭೆಗಾಗಿ ಒಟ್ಟು ಸೇರಿರುವ ಜಾಗತಿಕ ಮುಖಂಡರನ್ನು ಆಗ್ರಹಿಸಿದ್ದಾರೆ.

 ರಶ್ಯ ಆಕ್ರಮಣವನ್ನು ಹಿಮ್ಮೆಟ್ಟಿಸುವ ಕಾರ್ಯ ಮುಂದಿನ ದಿನಗಳಲ್ಲಿ ಕಠಿಣವಾಗಲಿದೆ. ಚಳಿಗಾಲದ ಬಳಿಕವೂ ಯುದ್ಧ ಮುಂದುವರಿದರೆ ಹಲವು ಸವಾಲುಗಳು ಎದುರಾಗಲಿದೆ. ಆದ್ದರಿಂದ ರಶ್ಯದ ವಿರುದ್ಧ ಇನ್ನಷ್ಟು ಕಠಿಣ ನಿರ್ಬಂಧ ಕ್ರಮ ಸೇರಿದಂತೆ ಗರಿಷ್ಟ ಪ್ರಯತ್ನ ನಡೆಸಿ ವರ್ಷಾಂತ್ಯದೊಳಗೆ ಯುದ್ಧಕ್ಕೆ ಮುಕ್ತಾಯ ಹೇಳಲು ಪ್ರಯತ್ನಿಸುವಂತೆ ಜಿ7 ದೇಶಗಳ ಮುಖಂಡರಿಗೆ ರವಾನಿಸಿರುವ ವೀಡಿಯೊ ಸಂದೇಶದಲ್ಲಿ ಝೆಲೆಂಸ್ಕಿ ಹೇಳಿದ್ದಾರೆ.

 ರಶ್ಯದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ಹಲವು ನಿರ್ಬಂಧ ವಿಧಿಸಿದ್ದರೂ, ಇನ್ನಷ್ಟು ಕಠಿಣ ಕ್ರಮದ ಅಗತ್ಯವಿದೆ. ರಶ್ಯದ ಮೇಲಿನ ಒತ್ತಡವನ್ನು ಸಡಿಲಗೊಳಿಸದೆ ಇನ್ನಷ್ಟು ಕಠಿಣ ಒತ್ತಡ ಹೇರಿದರೆ ಪರಿಣಾಮ ಬೀರಬಹುದು ಎಂದು ಝೆಲೆಂಸ್ಕಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News