×
Ad

"ಒಂದು ಸತ್ಯದ ಧ್ವನಿಯನ್ನು ಬಂಧಿಸಿದರೆ, ಅಂತಹಾ ಸಾವಿರಾರು ಧ್ವನಿಗಳು ಹುಟ್ಟುತ್ತವೆ"

Update: 2022-06-27 22:27 IST

ಹೊಸದಿಲ್ಲಿ: ಆಲ್ಟ್ ನ್ಯೂಸ್‌ ಸಹಸಂಸ್ಥಾಪಕ ಹಾಗೂ ಸತ್ಯಶೋಧಕ ಮುಹಮ್ಮದ್‌ ಝುಬೈರ್‌ ರನ್ನು ಬಂಧಿಸಿರುವ ದಿಲ್ಲಿ ಪೊಲೀಸರ ಕ್ರಮದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿದಂತೆ ಹಲವಾರು ಮಂದಿ ಪ್ರಮುಖರು ಈ ಕುರಿತು ಟ್ವೀಟ್‌ ಮಾಡಿ ಝುಬೈರ್‌ರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

"ಬಿಜೆಪಿಯ ದ್ವೇಷ, ಮತಾಂಧತೆ ಮತ್ತು ಸುಳ್ಳುಗಳನ್ನು ಬಹಿರಂಗಪಡಿಸುವ ಪ್ರತಿಯೊಬ್ಬ ವ್ಯಕ್ತಿಯೂ ಅವರಿಗೆ ಬೆದರಿಕೆಯಾಗಿದೆ. ಒಂದು ಸತ್ಯದ ಧ್ವನಿಯನ್ನು ಬಂಧಿಸಿದರೆ ಇನ್ನೂ ಸಾವಿರ ಧ್ವನಿಗಳನ್ನು ಅದು ಹುಟ್ಟುಹಾಕುತ್ತದೆ. ಸತ್ಯ ಯಾವಾಗಲೂ ದೌರ್ಜನ್ಯದ ಮೇಲೆ ಜಯಗಳಿಸುತ್ತದೆ" ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಜೊತೆಗೆ #ಡರೋಮತ್‌ (ಹೆದರದಿರಿ) ಎಂಬ ಹ್ಯಾಶ್‌ಟ್ಯಾಗ್‌ ಅನ್ನು ಬಳಸಿದ್ದಾರೆ. ಹಲವಾರು ಮಂದಿ ಗಣ್ಯರು, ಪತ್ರಕರ್ತರು ಝುಬೈರ್‌ ಬಂಧನವನ್ನು ವಿರೋಧಿಸಿ ಸಾಮಾಜಿಕ ತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ಮುಹಮ್ಮದ್‌ ಝುಬೈರ್‌ ರ ಬಂಧನದ ಕುರಿತು "ದಾಖಲೆಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೊರಕಿದ ನಂತರ" ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಅವರನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News