ಬ್ರಿಕ್ಸ್ ಮಾತುಕತೆಯಲ್ಲಿ ಪಾಲ್ಗೊಳ್ಳಲು ಒಬ್ಬ ಸದಸ್ಯರಿಂದ ತಡೆ: ಪಾಕ್ ಆರೋಪ

Update: 2022-06-27 17:17 GMT

ಇಸ್ಲಮಾಬಾದ್, ಜೂ.27: ಚೀನಾದ ಆತಿಥೇಯತ್ವದಲ್ಲಿ ವರ್ಚುವಲ್ ವೇದಿಕೆಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ತಾನು ಪಾಲ್ಗೊಳ್ಳುವುದನ್ನು ಓರ್ವ ಸದಸ್ಯ ತಡೆದಿದ್ದಾರೆ ಎಂದು ಪಾಕಿಸ್ತಾನ ಸೋಮವಾರ ಆರೋಪಿಸಿದೆ.

   ಈ ವರ್ಷದ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಜಾಗತಿಕ ಬೆಳವಣಿಗೆಗೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆ ನಡೆಯುವುದು ತನಗೆ ತಿಳಿದಿತ್ತು. ಹಲವು ಅಭಿವೃದ್ಧಿಶೀಲ ದೇಶಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದನ್ನು ಓರ್ವ ಸದಸ್ಯ ತಡೆದಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿದೆ.
ಇದು ಪರೋಕ್ಷವಾಗಿ ಭಾರತವನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News