ಅಸ್ಸಾಂ ನೆರೆ: ಒಟ್ಟು 134 ಮಂದಿ ಸಾವು; 21 ಲಕ್ಷ ಜನರು ಸಂತ್ರಸ್ತ‌

Update: 2022-06-28 17:45 GMT
Photo: PTI 

ಸಿಲ್ಚಾರ್, ಜೂ. 28:  ಅಸ್ಸಾಂ ನೆರೆ ಸಂಬಂಧಿ ದುರ್ಘಟನೆಗಳಲ್ಲಿ ಮತ್ತೆ 8 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ನೆರೆಯಿದಾಗಿ 2,254ಕ್ಕೂ ಅಧಿಕ ಗ್ರಾಮಗಳು ಹಾಗೂ 22 ಜಿಲ್ಲೆಗಳು ಜಲಾವೃತವಾಗಿವೆ. 21.52 ಲಕ್ಷ ಜನರು ನೆರೆ ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂನ ನೆರೆ ವರದಿ ಹಾಗೂ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಫ್‌ಆರ್‌ಐಎಂಎಸ್) ತಿಳಿಸಿದೆ. 

ಅಸ್ಸಾಂನ ಶೇ. 40 ಭೂಮಿ ನೆರೆಯಿಂದ ಹಾನಿಗೀಡಾಗಿದೆ. ಸಿಲ್ಚಾರ್‌ನ ಹೆಚ್ಚಿನ ಪಟ್ಟಣಗಳು ಜಲಾವೃತವಾಗಿವೆ. 
ಅಸ್ಸಾಂನಾದ್ಯಂತದ ಪರಿಹಾರ ಶಿಬಿರಗಳಲ್ಲಿ ಇರುವ 1.91 ಲಕ್ಷ ಜನರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನರು ಕಛೇರ್ ಜಿಲ್ಲೆಯೊಂದರ ಪರಿಹಾರ ಶಿಬಿರಗಳಲ್ಲಿ   ಇದ್ದಾರೆ. ಅದೇ ರೀತಿ ಒಟ್ಟು 715 ಪರಿಹಾರ ಹಾಗೂ ಪರಿಹಾರ ವಿತರಣಾ ಶಿಬಿರಗಳಲ್ಲಿ 333 ಕಛೇರ್ ಒಂದರಲ್ಲೇ ಕಾರ್ಯ ನಿರ್ವಹಿಸುತ್ತಿವೆ ಎಂದು ಎಫ್‌ಆರ್‌ಐಎಂಎಸ್‌ನ ದತ್ತಾಂಶ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News