"ಇದು ಇಸ್ಲಾಂ ಧರ್ಮಕ್ಕೆ ವಿರುದ್ಧ": ಉದಯಪುರ್ ಟೈಲರ್ ಹತ್ಯೆಗೆ ಜಮೀಯತ್ ಉಲಮ-ಇ-ಹಿಂದ್ ಖಂಡನೆ

Update: 2022-06-29 08:22 GMT

ಹೊಸದಿಲ್ಲಿ: ಉದಯಪುರ್ ನಲ್ಲಿ ಮಂಗಳವಾರ ಟೈಲರ್ ಒಬ್ಬರ ಹತ್ಯೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ ಜಮೀಯತ್ ಉಲಮ-ಇ-ಹಿಂದ್, "ಇದು ಇಸ್ಲಾಂ ಧರ್ಮ ಹಾಗೂ ನೆಲದ ಕಾನೂನಿಗೆ ವಿರುದ್ಧವಾಗಿದೆ" ಎಂದು ಹೇಳಿದೆ.

"ಜಮೀಯತ್ ಉಲಮ-ಇ-ಹಿಂದ್ ಇದರ ಪ್ರಧಾನ ಕಾರ್ಯದರ್ಶಿ ಮೌಲಾನ ಹಲ್ಸೀಮುದ್ದೀನ್ ಖಾಸ್ಮಿ ಅವರು ಉದಯಪುರದಲ್ಲಿ ಪ್ರವಾದಿ ವಿರುದ್ಧ ನಿಂದನೆಯ ಹಿನ್ನೆಲೆಯಲ್ಲಿ ನಡೆದ ಬರ್ಬರ ಹತ್ಯೆಯನ್ನು ಖಂಡಿಸುತ್ತದೆ ಹಾಗೂ ಇದನ್ನು ನೆಲದ ಕಾನೂನು ಹಾಗೂ ಇಸ್ಲಾಂ ಧರ್ಮದ ವಿರುದ್ಧ ಎಂದು ಬಣ್ಣಿಸುತ್ತದೆ,'' ಎಂದು ಜಮೀಯತ್ ಹೇಳಿಕೆ ತಿಳಿಸಿದೆ.

"ಈ ಕೃತ್ಯವನ್ನು ಯಾರೇ ನಡೆಸಿದ್ದರೂ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆಯಿರುವಾಗ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ. ದೇಶದ ಎಲ್ಲಾ ನಾಗರಿಕರಿಗೆ ತಮ್ಮ ಭಾವನೆಗಳನ್ನು ಹತ್ತಿಕ್ಕಲು ಹಾಗೂ ಶಾಂತಿ ಕಾಪಾಡಲು ಮೌಲಾನಾ ಹಕೀಮುದ್ದೀನ್ ಖಾಸ್ಮಿ ಮನವಿ ಮಾಡಿದ್ದಾರೆ,''ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News