ಸುವಾಸನೆಯುಕ್ತ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಇಯು ಪ್ರಸ್ತಾವನೆ

Update: 2022-06-29 17:29 GMT

ಬ್ರಸೆಲ್ಸ್, ಜೂ.29: ಕ್ಯಾನ್ಸರ್ ವಿರುದ್ಧದ ಹೋರಾಟದ ಯೋಜನೆಯಂತೆ, ಸುವಾಸನೆಯುಕ್ತ ಬಿಸಿ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧವನ್ನು ಯುರೋಪಿಯನ್ ಯೂನಿಯನ್‌ನ ಕಾರ್ಯನಿರ್ವಾಹಕ ವಿಭಾಗ ಪ್ರಸ್ತಾವಿಸಿದೆ ಎಂದು ವರದಿಯಾಗಿದೆ. ುುರೋಪಿಯನ್ ಯೂನಿಯನ್‌ನ 27 ಸದಸ್ಯ ರಾಷ್ಟ್ರಗಳಲ್ಲಿ ಇಂತಹ ಉತ್ಪನ್ನಗಳ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿರುವುದನ್ನು ಗಮನಿಸಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಯುರೋಪಿಯನ್ ಕಮಿಷನ್‌ನ ಇತ್ತೀಚಿನ ಅಧ್ಯಯನದ ಪ್ರಕಾರ ಇಂತಹ ಉತ್ಪನ್ನಗಳ ಮಾರಾಟದಲ್ಲಿ 2.5% ಹೆಚ್ಚಳ ದಾಖಲಾಗಿದೆ. ನಿಕೋಟಿನ್ ಅಂಶಗಳಿರುವ, ಹೊಗೆ ಹೊರಸೂಸುವ ತಂಬಾಕು ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುತ್ತದೆ. ಇ-ಸಿಗರೇಟ್‌ಗಳಲ್ಲಿ ನಿಕೋಟಿನ್ ಇರಬಹುದಾದರೂ ತಂಬಾಕನ್ನು ಹೊಂದಿಲ್ಲ. ಶ್ವಾಸಕೋಶದ ಕ್ಯಾನ್ಸರ್‌ನ 10 ಪ್ರಕರಣಗಳಲ್ಲಿ 9ಕ್ಕೆ ತಂಬಾಕು ಕಾರಣವಾಗಿರುವುದರಿಂದ ಧೂಮಪಾನದ ಮೇಲಿನ ಆಕರ್ಷಣೆ ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಯುರೋಪಿಯನ್ ಯೂನಿಯನ್‌ನ ಆಹಾರ ಮತ್ತು ಆರೋಗ್ಯ ಸುರಕ್ಷಾ ಆಯುಕ್ತೆ ಸ್ಟೆಲ್ಲಾ ಕಿರಿಯಾಕಿಡೆಸ್ ಹೇಳಿದ್ದಾರೆ. ಮಿಲಿಯನ್ ಪ್ರಜೆಗಳಿರುವ ಯುರೋಪಿಯನ್ ಒಕ್ಕೂಟದಲ್ಲಿ ಕ್ಯಾನ್ಸರ್‌ನಿಂದ ವಾರ್ಷಿಕ 1.3 ಮಿಲಿಯನ್ ಸಾವಿನ ಪ್ರಕರಣ ಮತ್ತು ಪ್ರತೀ ವರ್ಷ 3.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣದ ದಾಖಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News