ಅಟಾರ್ನಿ ಜನರಲ್ ಆಗಿ ಮತ್ತೆ 3 ತಿಂಗಳು ಮುಂದುವರಿಯಲು ಕೆ.ಕೆ. ವೇಣುಗೋಪಾಲ್ ಒಪ್ಪಿಗೆ

Update: 2022-06-29 18:19 GMT

ಹೊಸದಿಲ್ಲಿ, ಜೂ. 29: ಕೇಂದ್ರ ಸರಕಾರದ ಮನವಿಯ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ಅಟಾರ್ನಿ ಜನರಲ್ ಆಗಿ ಮುಂದುವರಿಯಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಒಪ್ಪಿಕೊಂಡಿದ್ದಾರೆ.

ಕೆ.ಕೆ. ವೇಣುಗೋಪಾಲ್ ಅವರ ಅಧಿಕಾರಾವಧಿ ಜೂನ್ 30ರಂದು ಅಂತ್ಯಗೊಳ್ಳಲಿದೆ. 
ವೈಯುಕ್ತಿಕ ಕಾರಣಗಳಿಂದಾಗಿ ಅಟಾರ್ನಿ ಜನರಲ್ ಆಗಿ ಮುಂದುವರಿಯಲು 91 ವರ್ಷದ ವೇಣುಗೋಪಾಲ್ ಅವರು ಉತ್ಸುಕರಾಗಿರಲಿಲ್ಲ. ಆದರೆ, ಕೇಂದ್ರ ಸರಕಾರದ ನಿರಂತರ ಮನವಿಯ ಬಳಿಕ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. 
ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರ ಸ್ಥಾನಕ್ಕೆ ವೇಣುಗೋಪಾಲ್ ಅವರು 2017 ಜುಲೈ 1ರಂದು ನೇಮಕರಾಗಿದ್ದರು. 
ಸುಪ್ರೀಂ ಕೋರ್ಟ್‌ನ ಖ್ಯಾತ ನ್ಯಾಯವಾದಿಯಾಗಿರುವ ವೇಣುಗೋಪಾಲ್ ಅವರು ಸಾಂವಿಧಾನಿಕ ಹಾಗೂ ಕಾರ್ಪೋರೇಟ್ ಕಾನೂನು ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾದಿಸಿದ್ದಾರೆ. ಅವರು 1979 ಹಾಗೂ 1980ರ ನಡುವೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News