ಲ್ಯಾಪ್ ಟಾಪ್ ವಶಕ್ಕೆ ಪಡೆಯಲು ಝುಬೈರ್ ಜೊತೆ ಬೆಂಗಳೂರಿಗೆ ತೆರೆಳಿದ ದಿಲ್ಲಿ ಪೊಲೀಸ್ ವಿಶೇಷ ಸೆಲ್

Update: 2022-06-30 08:22 GMT

ಹೊಸದಿಲ್ಲಿ: ದಿಲ್ಲಿ ಪೊಲೀಸ್ ವಿಶೇಷ ಸೆಲ್ ಗುರುವಾರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು   ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ವಿವಿಧ ವಿಷಯಗಳನ್ನು ಅಪ್‌ಲೋಡ್ ಮಾಡಲು ಬಳಸಿದ್ದ ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಳ್ಳಲು  ಝುಬೈರ್ ಜೊತೆಗೆ  ಬೆಂಗಳೂರಿಗೆ ತೆರಳಿದೆ  ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಅವರು ಝುಬೈರ್ ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ನಾಶ ಮಾಡಿದ್ದಾರೆ ಹಾಗೂ  ಪೊಲೀಸರಿಗೆ  ಅದನ್ನು ಹಸ್ತಾಂತರಿಸಲು ನಿರಾಕರಿಸುತ್ತಿದ್ದಾರೆ.

ಝುಬೈರ್ ಅಧಿಕಾರಿಗಳೊಂದಿಗೆ ಸಹಕರಿಸದೆ ನುಣುಚಿಕೊಳ್ಳುತ್ತಿದ್ದರು ಎಂದು ಸ್ಪೆಷಲ್ ಸೆಲ್ ಆರೋಪಿಸಿದೆ.

ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡ ನಂತರ, ಪೊಲೀಸರು ಅವರು ಪೋಸ್ಟ್ ಮಾಡಿದ ಸಂಪಾದಿತ ವಸ್ತುಗಳನ್ನು ಪರಿಶೀಲಿಸಲು ಹಾರ್ಡ್ ಡಿಸ್ಕ್ ಮೆಮೊರಿಯನ್ನು ಪ್ರವೇಶಿಸಲು ಪ್ರಯತ್ನಿಸಲಿದ್ದಾರೆ. ಲ್ಯಾಪ್‌ಟಾಪ್ ಅನ್ನು ಸಿಎಫ್‌ಎಸ್‌ಎಲ್, ರೋಹಿಣಿಯಲ್ಲಿರುವ  ಫೋರೆನ್ಸಿಕ್ ಪರೀಕ್ಷೆಗಳಿಗೆ ಕಳುಹಿಸಲಾಗುತ್ತದೆ.

"ನನ್ನ ಲ್ಯಾಪ್‌ಟಾಪ್ ಹಾಗೂ  ನನ್ನ ಫೋನ್ ಸಂಗ್ರಹಣೆಯು ನನ್ನ ವೈಯಕ್ತಿಕ ವಿಷಯಗಳು. ನಾನು ಅಧಿಕಾರದಲ್ಲಿರುವ ಕೆಲವು ಜನರ ವಿರುದ್ಧ ಸವಾಲು ಹಾಕುತ್ತಿದ್ದೇನೆ. ಹೀಗಾಗಿ ನನಗೆ ಕಿರುಕುಳ ನೀಡಲು ಅವರಿಗೆ ನನ್ನ ಲ್ಯಾಪ್‌ಟಾಪ್ ಬೇಕಾಗಿದೆ " ಎಂದು ಝುಬೈರ್ ತನ್ನ ವಕೀಲರಾದ ವೃಂದಾ ಗ್ರೋವರ್ ಮೂಲಕ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News