ಮೇ ಅಂತ್ಯದಲ್ಲಿ ವಾರ್ಷಿಕ ಬಜೆಟ್ ಗುರಿಯ ಶೇ.12.3ರಷ್ಟು ವಿತ್ತೀಯ ಕೊರತೆ

Update: 2022-06-30 17:21 GMT

ಹೊಸದಿಲ್ಲಿ,ಜೂ.30: ಸರಕಾರವು ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಭಾರತದ ವಿತ್ತೀಯ ಕೊರತೆಯು ಮೇ ಅಂತ್ಯದಲ್ಲಿ 2022-23ನೇ ಸಾಲಿನ ವಾರ್ಷಿಕ ಬಜೆಟ್ ಗುರಿಯ ಶೇ.12.3ರಷ್ಟಿದೆ.

ವಿತ್ತೀಯ ಕೊರತೆಯು ಸರಕಾರದ ವೆಚ್ಚ ಮತ್ತು ಆದಾಯದ ನಡುವಿನ ಅಂತರವಾಗಿದೆ.

ಪ್ರಸಕ್ತ ವಿತ್ತವರ್ಷಕ್ಕೆ ಸರಕಾರವು ವಿತ್ತೀಯ ಕೊರತೆಯು ಜಿಡಿಪಿಯ ಶೇ.6.40 ರಷ್ಟಿರಲಿದೆ ಎಂದು ಮುನ್ನಂದಾಜಿಸಿತ್ತು. ಹಿಂದಿನ ವರ್ಷದಲ್ಲಿ ಅದು ಶೇ.6.71ರಷ್ಟಿತ್ತು.

ಸರಕಾರದ ಅಂಕಿಅಂಶಗಳಂತೆ ಎಪ್ರಿಲ್-ಮೇ ನಡುವೆ ಬಜೆಟ್ ಅಂದಾಜಿನ ಶೇ.15.9ರಷ್ಟು ಅಥವಾ 3,07,589 ಕೋ.ರೂ.ಗಳ ಆದಾಯ ಬಂದಿತ್ತು. ಮೇ ಅಂತ್ಯದಲ್ಲಿ ಕೇಂದ್ರದ ಒಟ್ಟು ವೆಚ್ಚ 5.85 ಲ.ಕೋ.ರೂ.ಅಥವಾ ಈ ವರ್ಷದ ಬಜೆಟ್ ಅಂದಾಜಿನ ಶೇ.14.8ರಷ್ಟಿತ್ತು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಅದು ಬಜೆಟ್ ಅಂದಾಜಿನ ಶೇ.13.7ರಷ್ಟಿತ್ತು.

ಈ ವರ್ಷದ ಮೇ ಅಂತ್ಯದಲ್ಲಿ ಸರಕಾರದ ಒಟ್ಟು ಸ್ವೀಕೃತಿಯು 3.81 ಲ.ಕೋ.ರೂ. ಅಥವಾ ಪ್ರಸಕ್ತ ವಿತ್ತವರ್ಷಕ್ಕಾಗಿ ಬಜೆಟ್ ಅಂದಾಜಿನ ಶೇ.16.7ರಷ್ಟಿತ್ತು.

ಕಳೆದ ವರ್ಷ ವಿತ್ತೀಯ ಕೊರತೆಯು ಜಿಡಿಪಿಯ ಶೇ.9.2ರ ಸಾರ್ವಕಾಲಿಕ ಎತ್ತರವನ್ನು ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News