ಎಂಎಸ್‌ಎಂಇ ವಲಯದಲ್ಲಿ 200 ಕೋ.ರೂ.ವರೆಗಿನ ಸರಕಾರಿ ಆದೇಶಗಳಿಗೆ ಜಾಗತಿಕ ಟೆಂಡರ್ ಇಲ್ಲ: ಪ್ರಧಾನಿ ಮೋದಿ

Update: 2022-06-30 18:01 GMT

ಹೊಸದಿಲ್ಲಿ, ಜೂ. 30: 200 ಕೋ.ರೂ.ವರೆಗಿನ ಸರಕಾರಿ ಆದೇಶಗಳಿಗೆ ಇನ್ನು ಮುಂದೆ ಜಾಗತಿಕ ಟೆಂಡರ್‌ಗಳನ್ನು ಕರೆಯಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಇಲ್ಲಿ ತಿಳಿಸಿದರು.

ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ‘ಉದ್ಯಮಿ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಇದು 200 ಕೋ.ರೂ.ವರೆಗಿನ ಸರಕಾರಿ ಆದೇಶಗಳನ್ನು ಭಾರತಿಯ ಕಂಪೆನಿಗಳಿಗೆ ಮೀಸಲಿರಿಸುವ ನಿರ್ಧಾರವಾಗಿದೆ ಎಂದರು.

ಆದರೆ, ಕಂಪೆನಿಗಳು ವಿದೇಶಿ ಪೂರೈಕೆದಾರರ ಮೇಲೆ ಹೇರಲಾದ ನಿರ್ಬಂಧಗಳ ಅನಗತ್ಯ ಲಾಭ ಪಡೆಯಲು ಅಥವಾ ತಾವು ಸರಕಾರಕ್ಕೆ ಪೂರೈಕೆ ಮಾಡುವ ಉತ್ಪನ್ನಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಯೋಚಿಸಬಾರದು ಎಂದು ಅವರು ತಿಳಿಸಿದ್ದಾರೆ.

ಉತ್ಪನ್ನಗಳು ಯಾವ ಗುಣಮಟ್ಟದಿಂದ ಕೂಡಿರಬೇಕೆಂದರೆ, ದೇಶೀಯ ಕಂಪೆನಿಗಳಿಗೆ ಮಾತ್ರ ಪೂರೈಕೆಗೆ 500 ಕೋ. ರೂ. ಏರಿಕೆ ಮಾಡುವಂತೆ ಇರಬೇಕು ಎಂದು  ಮೋದಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News