ವಾಸ್ತವವನ್ನೇ ಸಮಾಜದ ಮುಂದೆ ಇಡುವುದು ನಿಜವಾದ ಪತ್ರಿಕಾ ಧರ್ಮ: ಸಿಇಓ ಪ್ರಸನ್ನ ಎಚ್

Update: 2022-07-01 14:10 GMT

ಉಡುಪಿ: ಪತ್ರಕರ್ತರು ತಮ್ಮ ಅಭಿಪ್ರಾಯವನ್ನು ತೋರಿಸದೆ ವಾಸ್ತವ ದಲ್ಲಿರುವ ವಿಚಾರವನ್ನೇ ಕನ್ನಡಿಯಂತೆ ಸಮಾಜದ ಮುಂದೆ ಇಡುವುದು ನಿಜವಾದ ಪತ್ರಿಕಾ ಧರ್ಮವಾಗಿದೆ. ಅದು ಬಿಟ್ಟು ಪತ್ರಕರ್ತರು ತಮ್ಮ ಅಭಿ ಪ್ರಾಯವನ್ನೇ ಇಡೀ ಸಮಾಜ ಒಪ್ಪಲು ಹೇಳುವುದು ಎಷ್ಟು ಸರಿ? ಪತ್ರಕರ್ತರು ಸ್ವಾರ್ಥ ಬಿಟ್ಟು ಪತ್ರಿಕಾ ಧರ್ಮವನ್ನು ಪಾಲಿಸಿದರೆ ಮಾತ್ರ ಸಮಾಜಕ್ಕೆ ಗೌರವ ತರುವ ಕೆಲಸ ಮಾಡಲು ಸಾಧ್ಯ ಎಂದು ಉಡುಪಿ ಜಿಪಂ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಪ್ರಸನ್ನ ಎಚ್. ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೆನಾನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿಯ ಮಣಿಪಾಲ ಇನ್ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆ- ಫೋಟೋಗ್ರಫಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂವಿಧಾನದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗವು ಇಂದು ಪತ್ರಿ ಕೋದ್ಯಮವಾಗಿದೆ. ಆದರೆ ಪತ್ರಕರ್ತರು ಪತ್ರಿಕಾರಂಗ ಕೇವಲ ಉದ್ಯಮ ಮಾತ್ರವಲ್ಲ ಎಂಬುದನ್ನು ಪತ್ರಿಕಾ ಧರ್ಮವನ್ನು ಪಾಲಿಸುವ ಮೂಲಕ ತೋರಿಸ ಬೇಕಾಗಿದೆ. ಪತ್ರಕರ್ತರು ಮಾಡುವ ವರದಿಗಳು ನಿಷ್ಪಕ್ಷಪಾತವಾಗಿದ್ದಲ್ಲಿ ಅದಕ್ಕೆ ನಿಜವಾದ ಮಹತ್ವ ದೊರೆಯು ತ್ತದೆ. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.

ಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾದರೂ ಪತ್ರಿಕೆ ಓದುವುದು ಕಡಿಮೆ ಆಗಿಲ್ಲ. ಆದುದರಿಂದ ನಿಜವಾಗಿಯೂ ಕನ್ನಡ ಭಾಷೆ ಮತ್ತು ಸಾಹಿತ್ಯ ವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಸಮಾಜದ ಸೇನಾನಿಗಳು. ಸಮಾಜ ನೋವು, ಕೆಡುಕುಗಳನ್ನು ಹೋಗಲಾಡಿಸಲು ನಿರಂತರ ಪ್ರಯತ್ನ ಮಾಡುತ್ತಾರೆ ಎಂದು ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಅವರನ್ನು ಸನ್ಮಾನಿಸಲಾಯಿತು.  ಈ ಸಾಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಹಾಗೂ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರನ್ನು ಗೌರವಿಸಲಾಯಿತು.

ಈ ಬಾರಿಯ  ಎಸೆಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ‘ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಆಧುನಿಕ ಕ್ಯಾಮೆರಗಳ ಪಾತ್ರ’ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಾರ್ತಾಧಿಕಾರಿ ಮಂಜುನಾಥ್, ಮಂಗಳೂರಿನ ಮಹಾವೀರ ಏಜೆನ್ಸಿಯ ಮುಖ್ಯಸ್ಥ ಸುಧಾಕರ್ ಶೆಣೈ, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ದೆಹಲಿ ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಇದರ ಸದಸ್ಯ ಅರುಣ್ ಕುಮಾರ್ ಮಾತನಾಡಿದರು.

ಪ್ರಧಾನ ಕಾರ್ಯ ದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಚೇತನ್ ಪೂಜಾರಿ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News