ಬೇಡಿಕೆ ಈಡೇರಿಕೆಗಾಗಿ ಪೌರಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

Update: 2022-07-01 14:12 GMT

ಉಡುಪಿ, ಜು.೧: ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಗುತ್ತಿಗೆ ಪದ್ಧತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ತಕ್ಷಣವೇ ರಾಜ್ಯ ಸರಕಾರವು ಪೌರಕಾರ್ಮಿಕರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.

ಪೌರಕಾರ್ಮಿಕ ಕೆಲಸವು ಅತ್ಯಂತ ಕಷ್ಟದ ಕೆಲಸ ಆಗಿರುವುದರಿಂದ ಅವರಿಗೂ ಕೂಡ ಸರಕಾರಿ ನೌಕರರ ಮಾನ್ಯತೆ ನೀಡಬೇಕು. ಪೌರಕಾರ್ಮಿಕರನ್ನು ಹೊರ ಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳದೆ ನೇರ ನೇಮಕಾತಿ ಮಾಡ ಬೇಕು. ಗುತ್ತಿಗೆ ಮುಖಾಂತರ ನೇಮಿಸುವುದನ್ನು ನಿಲ್ಲಿಸಬೇಕು. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿರುವವರಾಗಿದ್ದಾರೆ. ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಪಟ್ಟಣವು ಸುಚಿತ್ವವಾಗಿ ಡಲು ಅಸಾಧ್ಯ ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.

ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿನಯ ಕುಮಾರ್, ಕಾರ್ಯದರ್ಶಿ ಸಂದೀಪ್, ಕೋಶಾಧಿಕಾರಿ ಸುದೀಪ್, ಕಾರ್ಕಳದ ವಸಂತ, ಕುಂದಾಪುರದ ಪ್ರಭಾಕರ್, ಸಾಲಿಗ್ರಾಮದ ವಿಕ್ಟರ್, ಕಾಪುವಿನ ರಮೇಶ್, ಕಾಂಗ್ರೆಸ್ ಮುಖಂಡ ರಾದ ಯತೀಶ್ ಕರ್ಕೇರ, ಶರತ್ ಶೆಟ್ಟಿ, ಗಣೇಶ್ ನೆರ್ಗಿ, ಗಣೇಶ್ ದೇವಾಡಿಗ, ಸಾಯಿರಾಜ್ ಕಿದಿಯೂರು, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.

"ಬೇಡಿಕೆ ಈಡೇರಿಕೆಗಾಗಿ ಬೆಳಗ್ಗೆಯಿಂದ ಸಂಜೆ ೬.೩೦ರವರೆಗೆ ಧರಣಿ ನಡೆಸಿ ದ್ದೇವೆ. ಸಂಘದ ಪದಾಧಿಕಾರಿ ಗಳನ್ನು ಬೆಂಗಳೂರಿನಲ್ಲಿ ಮಾತುಕತೆಗೆ ಕರೆಯ ಲಾಗಿದ್ದು, ಇಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದ್ದರೆ ನಾಳೆಯಿಂದ ಮತ್ತೆ ಹೋರಾಟವನ್ನು ಮುಂದುವರೆಸಲಾಗುವುದು".

-ವಿನಯ ಕುಮಾರ್, ಜಿಲ್ಲಾಧ್ಯಕ್ಷರು, ಹೊರಗುತ್ತಿಗೆ ನೌಕರರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News