ಜೂನ್ ನಲ್ಲಿ 1.44 ಲಕ್ಷ ಕೋಟಿ ದಾಟಿದ ಮಾಸಿಕ ಜಿಎಸ್‌ಟಿ ಸಂಗ್ರಹ

Update: 2022-07-01 14:28 GMT

ಹೊಸದಿಲ್ಲಿ: ಈ ವರ್ಷದ ಜೂನ್‌ನಲ್ಲಿ 1.44 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 56 ರಷ್ಟು ಹೆಚ್ಚಾಗಿದೆ.

  ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ 1,40,885 ಕೋಟಿ ರೂ. ಆಗಿತ್ತು. ಇದು ವಾರ್ಷಿಕ ಆಧಾರದ ಮೇಲೆ 44 ಶೇಕಡ ಅಧಿಕವಾಗಿತ್ತು. ಈಗ ಜಿಎಸ್‌ಟಿ ಸಂಗ್ರಹವು 1.40 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿರುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜಿಎಸ್‌ಟಿ ಜಾರಿಯಾದ ನಂತರ ಇದು 5ನೇ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ 1.40 ಲಕ್ಷ ಕೋಟಿ ದಾಟಿದೆ. ಇದಕ್ಕೂ ಮುನ್ನ 2022ರ ಏಪ್ರಿಲ್‌ನಲ್ಲಿ 1,67,540 ಕೋಟಿ ರೂ., 2022ರ ಮಾರ್ಚ್‌ನಲ್ಲಿ 1,42,095 ಕೋಟಿ ರೂ., 2022ರ ಜನವರಿಯಲ್ಲಿ 1,40, 986 ಕೋಟಿ ರೂ., 2022ರ ಮೇನಲ್ಲಿ 1,40,885 ಕೋಟಿ ರೂ. ಸಂಗ್ರಹವಾಗಿತ್ತು.

ಭಾರತದ ಅತಿದೊಡ್ಡ ತೆರಿಗೆ ಬದಲಾವಣೆ ಎಂದು ಪರಿಗಣಿಸಲಾದ ಜಿಎಸ್‌ಟಿ ಜಾರಿಯಾಗಿ 5 ವರ್ಷಗಳು ಪೂರ್ಣಗೊಂಡಿದೆ. ಈ 5 ವರ್ಷಗಳಲ್ಲಿ ಮಾಸಿಕ 1 ಲಕ್ಷ ಕೋಟಿ ಆದಾಯ ಸಂಗ್ರಹ ಸಾಮಾನ್ಯವಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News