ಬೆಳ್ಳಾರೆ: ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ತರಗತಿ ಆರಂಭ

Update: 2022-07-02 06:59 GMT

ಬೆಳ್ಳಾರೆ, ಜು.2: ಭಾರತ ಸರಕಾರದಿಂದ ಪ್ರವರ್ತಿತ ನ್ಯಾಶನಲ್ ಡೆವಲಪ್ ಮೆಂಟ್ ಏಜನ್ಸಿ ಭಾರತ್ ಸೇವಕ್ ಸಮಾಜದ  ಅಂಗೀಕೃತ ಸಂಸ್ಥೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 2022-23ನೇ ಸಾಲಿನ ಒಂದು ವರ್ಷದ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ತರಗತಿ ಜು.1ರಂದು ಆರಂಭಗೊಂಡಿತು.

ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್ ಪಿ. ತರಗತಿಗೆ ಚಾಲನೆ ನೀಡಿದರು. ಬೆಳ್ಳಾರೆ ಕೆ.ಪಿ.ಎಸ್.ನ ಗೌರವ ಶಿಕ್ಷಕಿ ಲಾವಣ್ಯಾ, ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉಪನ್ಯಾಸಕಿ ಗೀತಾ ಬಾಲಚಂದ್ರ, ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು ಉಪಸ್ಥಿತರಿದ್ದರು.

ಮೊಂಟೆಸ್ಸರಿ ವಿಧಾನದ ವಿವಿಧ ಅಧ್ಯಯನ ಮಾದರಿಗಳು ತಯಾರಿಸುವುದು ಹಾಗೂ ಅವುಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಪರಿಣಾಮಕಾರಿಯಾಗಿ ಬೋಧಿಸುವ ವಿಧಾನಗಳನ್ನು ಇಲ್ಲಿನ ತರಬೇತಿಯಲ್ಲಿ ಕಲಿಸಿಕೊಡಲಾಗುತ್ತಿದೆ. ತರಬೇತಿಯ ಅವಧಿಯಲ್ಲಿ ವಾರ್ಷಿಕ ವಿಶೇಷ ಶಿಬಿರ, ಅಧ್ಯಯನ ಪ್ರವಾಸ, ಪ್ರಾಯೋಗಿಕ ತರಗತಿ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಉಚಿತ ಇಂಗ್ಲೀಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ.

ದ್ವಿತೀಯ ಪಿಯು ಉತ್ತೀರ್ಣರಾದ ಅಭ್ಯರ್ಥಿಗಳು ಅಥವಾ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ತರಬೇತಿಗೆ ಸೇರಬಹುದಾಗಿದೆ. ಆಸಕ್ತರು ಬೆಳ್ಳಾರೆ ಮತ್ತು ಸುಳ್ಯದಲ್ಲಿರುವ ಜ್ಞಾನದೀಪ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News