ಉಪ ರಾಷ್ಟ್ರಪತಿ ಚುನಾವಣೆ : ಅಮರಿಂದರ್ ಸಿಂಗ್ ಎನ್‌ಡಿಎ ಅಭ್ಯರ್ಥಿ ?

Update: 2022-07-02 16:53 GMT

ಹೊಸದಿಲ್ಲಿ, ಜು. 2:  ಮುಂಬರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ. 

ಉಪ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಅವರನ್ನು ಎನ್‌ಡಿಎ ಹೆಸರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 
‘‘ಉಪ ರಾಷ್ಟ್ರಪತಿ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿವೆ. ಅವರಲ್ಲಿ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಪ್ರಮುಖರಾಗಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯನ್ನು ಬಿಜೆಪಿ ಉನ್ನತ ನಾಯಕತ್ವ ಹಾಗೂ ಸಂಸದೀಯ ಮಂಡಳಿ ಅಂತಿಮಗೊಳಿಸಲಿದೆ’’ ಎಂದು ಬಿಜೆಪಿಯಲ್ಲಿರುವವರು ತಿಳಿಸಿದ್ದಾರೆ. 

ಅಮರಿಂದರ್ ಸಿಂಗ್ ಅವರು ಪ್ರಸ್ತುತ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಲಂಡನ್‌ನಲ್ಲಿ ಇದ್ದಾರೆ. ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಅವರ ಹೆಸರನ್ನು ಪ್ರಸ್ತಾವಿಸಿರುವ ಬಗ್ಗೆ ಇದುವರೆಗೆ ದೃಢೀಕರಣ ದೊರಕಿಲ್ಲ ಎಂದು ಅಮರಿಂದರ್ ಸಿಂಗ್ ಆಪ್ತರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News