ಸಿಎಂಗೆ ಕುಲಾಧಿಪತಿ ಹುದ್ದೆ; ಮಸೂದೆ ವಾಪಾಸು ಕಳುಹಿಸಿದ ಕೊಲ್ಕತ್ತಾ ರಾಜ್ಯಪಾಲ

Update: 2022-07-03 02:31 GMT
ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯನ್ನಾಗಿಸುವ ಸಂಬಂಧದ ಮಸೂದೆಯನ್ನು ರಾಜ್ಯಪಾಲ ಜಗದೀಪ್ ಧನ್‍ಕರ್ ಶನಿವಾರ "ಅಪೂರ್ಣ ಅನುಸರಣೆ" ನೆಲೆಯಲ್ಲಿ ವಾಪಾಸು ಕಳುಹಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯವರನ್ನು ರಾಜ್ಯ ವಿವಿಗಳ ಕುಲಾಧಿಪತಿಯನ್ನಾಗಿಸುವ ಮಸೂದೆಯನ್ನು ಜೂನ್ 14ರಂದು ರಾಜ್ಯ ವಿಧಾನಸಭೆ ಆಂಗೀಕರಿಸಿತ್ತು.

ವಿಧಾನಸಭಾ ಕಾರ್ಯಾಲಯ ಮುಖ್ಯಮಂತ್ರಿಯವರನ್ನು ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿಸುವ ಮಸೂದೆ ಸೇರಿದಂತೆ ಮಸೂದೆಗಳನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸುವ ವೇಳೆ, ಮಸೂದೆಗಳ ಮೇಲಿನ ಚರ್ಚೆ ಬಗೆಗಿನ ಸಂಪೂರ್ಣ ಅಧಿಕೃತ ವರದಿಯನ್ನು ಸಿದ್ಧವಾದ ತಕ್ಷಣ ಕಳುಹಿಸಿಕೊಡುವುದಾಗಿ ಹೇಳಿತ್ತು. ರಾಜ್ಯಪಾಲರು ಈ ಮಸೂದೆಗಳನ್ನು ವಾಪಾಸು ಕಳುಹಿಸಿದ್ದು, ಅಪೂರ್ಣ ಮಾಹಿತಿಯನ್ನು ಒಳಗೊಂಡಿರುವುದ ರಿಂದ ಇದು ಅಸಮರ್ಪಕ ಎಂದು ರಾಜ್ಯಪಾಲರ ಕಚೇರಿಯ ಪ್ರಕಟಣೆ ಹೇಳಿದೆ.

ರಾಜ್ಯಪಾಲರ ಈ ಕ್ರಮ, ಮಹೂವಾ ಮುಖರ್ಜಿಯವರನ್ನು ರಬೀಂದ್ರ ಭಾರತಿ ವಿವಿಯ ಕುಲಪತಿಯಾಗಿ ನೇಮಿಸಿದ ಕ್ರಮವನ್ನು ಸಮರ್ಥಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ರಾಜ್ಯಪಾಲರ ನಡೆ ವಿವಿ ಆಡಳಿತ ಹಾಗೂ ರಾಜಕೀಯ ವಲಯದಲ್ಲಿ ಕಿಡಿ ಹೊತ್ತಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಮಸೂದೆ ಆಂಗೀಕಾರವಾದ ಹಿನ್ನೆಲೆಯಲ್ಲಿ ಆರ್‍ಬಿಯು ಕುಲಪತಿ ನೇಮಕ ವಿಚಾರದ ಮರುಪರಿಶೀಲನೆಗೆ ಸಂಬಂಧಿಸಿದಂತೆ ಜೂನ್ 30ರಂದು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಸಿಎಂ ಅವರನ್ನು ಕುಲಾಧಿಪತಿಯಾಗಿ ಮಾಡುವ ಮಸೂದೆಯನ್ನು ಸದನ ಆಂಗೀಕರಿಸಿದ ಬಳಿಕ ರಾಜ್ಯಪಾಲರು ಆರ್‍ಬಿಯು ವಿವಿ ಕುಲಪತಿಯನ್ನು ನೇಮಕ ಮಾಡುವುದು ಸಮಂಜಸವಲ್ಲ ಎಂದು ಸ್ಪೀಕರ್ ಬಿಮನ್ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಆಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News